ರಾಜ್ಯದಲ್ಲಿ ಶುಕ್ರವಾರ ಮತ್ತು ಶನಿವಾರ ಮಳೆಯಾಗುವ ಸಾಧ್ಯತೆಗಳಿವೆ. ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ.
ಆದ್ರೆ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಮಳೆಯ ಪ್ರಮಾಣ ಕಡಿಮೆ. ಆದ್ರೆ ಈ ಅಕಾಲಿಕ ಮಳೆ ರೈತರಿಗೆ ಸಂಕಷ್ಟ ತಂದೊಡ್ಡುತ್ತಿದೆ. ಈಗ ಮತ್ತೆ ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಇದರ ಜೊತೆಗೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯ ಇರಲಿದ್ದು, ಚಳಿ ಸಹ ಹೆಚ್ಚಾಗಲಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗಲಿದೆ.
ರಾಜ್ಯದ ಜಿಲ್ಲಾವಾರು ಹವಾಮಾನ ವರದಿ
ಬೆಂಗಳೂರು 26-18, ಮೈಸೂರು 28-19, ಚಾಮರಾಜನಗರ 28-20, ರಾಮನಗರ 28-19, ಮಂಡ್ಯ 28-20, ಬೆಂಗಳೂರು ಗ್ರಾಮಾಂತರ 26-18, ಚಿಕ್ಕಬಳ್ಳಾಪುರ 25-16, ಕೋಲಾರ 26-17, ಹಾಸನ 27-16, ಚಿಕ್ಕಮಗಳೂರು 26-18, ದಾವಣಗೆರೆ 29-21, ಶಿವಮೊಗ್ಗ 28-21, ಕೊಡಗು 26-18, ತುಮಕೂರು 27-18
ಉಡುಪಿ 32-25, ಮಂಗಳೂರು 32-24, ಉತ್ತರ ಕನ್ನಡ 29-22, ಧಾರವಾಡ 31-24, ಹಾವೇರಿ 28-21, ಹುಬ್ಬಳ್ಳಿ 28-21, ಬೆಳಗಾವಿ 26-20, ಗದಗ 28-20, ಕೊಪ್ಪಳ 29-21, ವಿಜಯಪುರ 28-21, ಬಾಗಲಕೋಟ 29-21, ಕಲಬುರಗಿ 29-20, ಬೀದರ್ 27-18, ಯಾದಗಿರಿ 28-19, ರಾಯಚೂರ 29-20, ಬಳ್ಳಾರಿ 29-21