Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇರಳ ಶೈಲಿಯ ಚಿಕನ್ ಪಕೋಡಾ ರೆಸಿಪಿ

ಕೇರಳ ಶೈಲಿಯ ಚಿಕನ್ ಪಕೋಡಾ ರೆಸಿಪಿ
ಕೇರಳ , ಗುರುವಾರ, 28 ಅಕ್ಟೋಬರ್ 2021 (10:19 IST)
ಈ ಚಿಕನ್ ರೆಸಿಪಿಗಳು ಸಾಕಷ್ಟು ವಿಧಾನಗಳಲ್ಲಿ ತಯಾರಿಸಿ ರುಚಿ ನೋಡಿದ್ದೇವೆ. ಇದೊಂದು ಹೊಸ ರುಚಿ ಕೇರಳ ಭಾಗದಲ್ಲಿ ಚಿಕೆನ್ ಪಕೋಡವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.
ಹಾಗಾಗಿ ಈ ಒಂದು ರೆಸಿಪಿ ನೀವು ಟ್ರೈ ಮಾಡಿ ಆ ಹೊಸ ರುಚಿಯನ್ನು ಸವಿಯಿರಿ,
ಸಂಜೆ ಸಮಯದ ಟೀ ಸವಿಯಲು ಚಿಕನ್ ಪಕೋಡ ಅತ್ಯುತ್ತಮ ಸಾಥ್ ನೀಡುವುದು. ವಿವಿಧ ಮಸಾಲೆಯಿಂದ ಕೂಡಿರುವ ಚಿಕನ್ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು.
 ಬೇಕಾಗುವ ಸಾಮಗ್ರಿಗಳು
350 ಗ್ರಾಮ್ಸ್ ಅಗತ್ಯಕ್ಕೆ ತಕ್ಕಷ್ಟು ಕೋಳಿ
•1 ಕಪ್ ಅಗತ್ಯಕ್ಕೆ ತಕ್ಕಷ್ಟು ಮೈದಾ
•1 ಕಪ್ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ಹಿಟ್ಟು
•2 ಚಮಚ ಅಗತ್ಯಕ್ಕೆ ತಕ್ಕಷ್ಟು ಜೋಳದ ಹಿಟ್ಟು
•2 - ಅಗತ್ಯಕ್ಕೆ ತಕ್ಕಷ್ಟು ಕಂದು ಮೊಟ್ಟೆ
•1 ಚಮಚ ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ
•2 ಚಮಚ ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಪುಡಿ
•1 ಚಮಚ ಪುಡಿ ಮಾಡಿದ ಕರಿಮೆಣಸು
•1/2 ಚಮಚ ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
•3 - ಅಗತ್ಯಕ್ಕೆ ತಕ್ಕಷ್ಟು ಈರುಳ್ಳಿ
•4 - ಕತ್ತರಿಸಿದ ಕೊತ್ತಂಬರಿ ಸೊಪ್ಪು
•2 ಚಮಚ ಕತ್ತರಿಸಿದ ಬೆಳ್ಳುಳ್ಳಿ
•2 ಚಮಚ ಅಗತ್ಯಕ್ಕೆ ತಕ್ಕಷ್ಟು ಶುಂಠಿ
•1 ಹಸಿಮೆಣಸಿನಕಾಯಿ
•1 ಚಮಚ ಅಗತ್ಯಕ್ಕೆ ತಕ್ಕಷ್ಟು ಜೀರಿಗೆ
•1 ಚಮಚ ಅಗತ್ಯಕ್ಕೆ ತಕ್ಕಷ್ಟು ಮಾಂಸದ ಅಡುಗೆಗೆ ಬಳಸುವ ಮಸಾಲ
•1 ಚಮಚ ಅಗತ್ಯಕ್ಕೆ ತಕ್ಕಷ್ಟು ಗರಂ ಮಸಾಲ ಪುಡಿ
•1 ಚಮಚ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಸೋಡಾ
ತಯಾರಿಸುವ ವಿಧಾನ
- ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಧನಿಯಾ, ಮೆಣಸಿನ ಪುಡಿ, ಅರಿಶಿನ, ಮೊಟ್ಟೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಚಿಕನ್ ಮಸಾಲ, ಗರಂ ಮಸಾಲ, ಇಂಗು, ಬೇಕಿಂಗ್ ಪೌಡರ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ.
- ಎಲ್ಲಾ ಸಾಮಾಗ್ರಿಗಳಿಗೆ ಸ್ವಲ್ಪ ನೀರನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.- ನಂತರ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿ.- ಎರಡು ಚಮಚ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ. ಅದು ಪಕೋಡಕ್ಕೆ ಉತ್ತಮ ರುಚಿ ನೀಡುವುದು.
- ಪಕೋಡ ಬೇಯಿಸುವ ಮೊದಲು 30 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.- ಎಣ್ಣೆ ಬಿಸಿಯಾದ ಬಳಿಕ ಮಿಶ್ರಣವನ್ನು ಎಣ್ಣೆಯಲ್ಲಿ ಬಿಡಿ.- ಪಕೋಡವು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು.
- ಗರಿಗರಿಯಾದ ಪಕೋಡವನ್ನು ಸಾಸ್ ಜೊತೆಗೆ ಸೇವಿಸಿ.- ಇದನ್ನು ಸಂಜೆ ಸಮಯದ ಟೀ ಅಥವಾ ಊಟದ ಮೊದಲು ಸ್ಟಾರ್ಟರ್ ಆಗಿ ಸೇವಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರ ಬ್ರೆಡ್ ಮೊಸರು ವಡೆ ರೆಸಿಪಿ ಒಮ್ಮೆ ಟ್ರೈ ಮಾಡಿ