ಬೆಂಗಳೂರು : ವಾಹನ ಸವಾರರೇ ಇನ್ಮುಂದೆ ವಾಹನ ಚಲಾಯಿಸುವಾಗ ಎಚ್ಚರವಾಗಿರಿ. ಅದರಲ್ಲೂ ಕಾರು ಚಾಲಕರು ಇದನ್ನು ಗಮನಿಸಲೇಬೇಕು.
ಇನ್ನು ಮುಂದೆ ಸೀಟ್ ಬೆಲ್ಟ್ ಧರಿಸದೇ ಹೋದಲ್ಲಿ 1,000 ರೂ. ದಂಡ ಕಟ್ಟಬೇಕಾಗುತ್ತದೆ.
ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದ ಅನ್ವಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಎಸ್ಪಿ ಕಚೇರಿಗೆ ಈ ಆದೇಶ ಪ್ರತಿ ರವಾನೆಯಾಗಿದೆ.
ಸೀಟ್ ಬೆಲ್ಟ್ ಧರಿಸದೇ ಜನರು ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ ದಂಡವನ್ನು ಹೆಚ್ಚಿಸಲಾಗಿದೆ.