Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಇಂದು ದಸರಾ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನೆರವೇರಿದೆ.ಶ್ರೀ ಅಣ್ಣಮ್ಮದೇವಿ ದೇವಸ್ಥಾನ , ಶರನ್ನವರಾತ್ರಿ ಮಹೋತ್ಸವ ನಡೆಯುತ್ತಿದೆ.ಕೋವಿಡ್ ಯಿಂದ ದೇವಸ್ಥಾನಗಳಲ್ಲಿ ಎರಡು ವರ್ಷಗಳಿಂದ ಭಕ್ತರಿಗೆ ಮಂಗಳಾರತಿ, ತೀರ್ಥ ಪ್ರಸಾದಗಳನ್ನು ನೀಡದೆ, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.ಆದ್ರೆ ಈ ಬಾರಿ ದೇವಾಲಯಗಳಲ್ಲಿ ಕೂಡ ವಿಶೇಷ ಅಲಂಕಾರಗಳು, ಪೂಜೆ, ಹೋಮ, ಹವನಗಳು, ಸೇರಿದಂತೆ ವಾಹನಗಳಿಗೆ ಪೂಜೆಯಧಿನ್ನು ಸಡಗರ, ಸಂಭ್ರಮದಿಂದ ತಯಾರಿ ಮಾಡಲಾಗಿದೆ.ಮಂಗಳವಾರ ಮತ್ತು ಬುಧವಾರ (ಆಯುಧ ಪೂಜೆ ಮತ್ತು ವಿಜಯದಶಮಿ)ದಂದು ದೇವಾಲಯಗಳಿಗೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ಧತೆಗಳು ನಡೆದಿದೆ.
ದೇವಸ್ಥಾನದಲ್ಲಿ ಆಯುಧ ಪೂಜೆಯ ಪ್ರಯುಕ್ತ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುತ್ತಾರೆ.ಮಂಗಳವಾರ (ಆಯುಧಪೂಜೆ) ಮತ್ತು ಬುಧವಾರ (ವಿಜಯದಶಮಿ)ಇರುವುದರಿಂದ ವಾಹನಗಳಿಗೆ ವಿಶೇಷವಾದ ಪೂಜೆ ನೆರವೇರಿಸಲಿದ್ದಾರೆ.