Publish Date: Sun, 14 Oct 2018 (06:58 IST)
Updated Date: Sun, 14 Oct 2018 (06:59 IST)
ಚಾಮರಾಜನಗರ : ಒಬ್ಬ ತಾಯಿ ತಾನು ಹೆತ್ತ ಮಕ್ಕಳಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ ಘಟನೆಗಳನ್ನು ಕೇಳಿದ್ದೇವೆ. ಆದರೆ ತನ್ನ ಸ್ವಾರ್ಥಕ್ಕಾಗಿ ತಾನು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡದ ಘಟನೆ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.
ಸಾಕಮ್ಮ (31) ಹೆತ್ತ ಮಗನನ್ನೇ ಬಲಿ ತೆಗೆದುಕೊಂಡ ಪಾತಕಿ, ಪ್ರೀತಂ (7) ತಾಯಿಯಿಂದ ಕೊಲೆಯಾದ ದುರ್ದೈವಿ. ಅಕ್ಟೋಬರ್ 5 ರಂದು ಪ್ರೀತಂನ ತಂದೆ ಇಲ್ಲದ ವೇಳೆ ತಾಯಿ ಸಾಕಮ್ಮ ಪ್ರಿಯಕರ ನಾಗರಾಜು ಎಂಬಾತನ ಜೊತೆ ಅಕ್ರಮ ಸಂಬಂಧದಲ್ಲಿ ತೊಡಗಿದ್ದಳು.
ಆಗ ಮಲಗಿದ್ದ ಮಗ ಪ್ರೀತಂ ನಿದ್ದೆಯಿಂದ ಎದ್ದಾಗ ತಾಯಿ ಬೇರೆ ವ್ಯಕ್ತಿಯ ಜೊತೆಗೆ ಇರುವುದನ್ನು ಕಂಡು ತಂದೆಗೆ ಹೇಳ್ತೀನಿ ಎಂದಿದ್ದಾನೆ. ಆಗ ಭಯಗೊಂಡ ತಾಯಿ ಸಾಕಮ್ಮ ಹಾಗು ಆಕೆಯ ಪ್ರಿಯಕರ ಸೇರಿ ಪ್ರೀತಂನನ್ನು ಕತ್ತು ಹಿಸುಕಿ ಕೊಲೆ ಮಾಡಿ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಎಸೆದಿದ್ದಾರೆ.
ನಂತರ ಮಗುವಿನ ಶವ ಸಿಕ್ಕಿದ ಮೇಲೆ ಮಗುವಿನ ತಂದೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಹಿನ್ನಲೆಯಲ್ಲಿ ನಂಜುಂಡಸ್ವಾಮಿ ಮತ್ತು ಸಾಕಮ್ಮಳನ್ನ ವಿಚಾರಣೆ ನಡೆಸಿದಾಗ ಭಯಗೊಂಡ ಸಾಕಮ್ಮ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಿಯಕರ ನಾಗರಾಜುನನ್ನ ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.