Publish Date: Mon, 25 Jun 2018 (19:11 IST)
Updated Date: Mon, 25 Jun 2018 (19:18 IST)
ಚಾಮರಾಜನಗರ: ಅಂಗರಕ್ಷಕರಿಲ್ಲದೇ ಕ್ಯಾಬಿನೇಟ್ ಮಂತ್ರಿಯೊಬ್ಬರು ವಾಕಿಂಗ್ ಮಾಡಿದ್ದಾರೆ. ನಸುಕಿನ ಜಾವ ನಾಲ್ಕುವರೆಯಿಂದ ಆರು ಗಂಟೆವರೆಗೆ ಏಕಾಂಗಿಯಾಗಿ ರಸ್ತೆಯಲ್ಲಿ ವಾಕ್ ಮಾಡಿದ ಸಚಿವರನ್ನು ಕಂಡು ಸಾರ್ವಜನಿಕರು ಗಲಿಬಿಲಿಗೊಂಡರು. ಏಕೆಂದರೆ ಪೊಲೀಸರ ಭದ್ರತೆಯಿಲ್ಲದೇ ಕ್ಯಾಬಿನೆಟ್ ದರ್ಜೆ ಸಚಿವರು ವಾಕಿಂಗ್ ಮಾಡಿದ್ದಾರೆ. ಸಚಿವರ ಸರಳತೆಯನ್ನು ಪೊಲೀಸರು ದುರುಪಯೋಗ ಪಡಿಸಿಕೊಂಡರಾ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಯಿತು. ಅಂದಹಾಗೆ ಅಂಗರಕ್ಷಕರಿಲ್ಲದೇ ವಾಕಿಂಗ್ ಮಾಡಿದವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ. ಎರಡು ದಿನಗಳಿಂದ ತಮ್ಮ ಸ್ವಗ್ರಾಮ ಉಪ್ಪಿನಮೋಳೆಯ ಮನೆಯಲ್ಲಿ ಸಚಿವರು ವಾಸ್ತವ್ಯ ಹೂಡಿದ್ದಾರೆ. ಹಗಲು ಹೊತ್ತಿನಲ್ಲಿ ಎರಡೆರಡು ಎಸ್ಕಾರ್ಟ್ ಭದ್ರತೆ ನೀಡಲಾಗುತ್ತದೆ. ಆದರೆ ರಾತ್ರಿ ವೇಳೆ ಸಚಿವರ ಮನೆ ಬಳಿ ಒಬ್ಬ ಭದ್ರತಾ ಸಿಬ್ಬಂದಿಯೂ ಇರುವುದಿಲ್ಲ. ಕೊನೆಗೆ ವಿಷಯ ಅರಿತ ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರ ಮನೆ ಬಳಿ ರಾತ್ರಿ ವೇಳೆ ಇಲಾಖೆಯಿಂದ ಭದ್ರತೆ ಕಲ್ಪಿಸುವುದಾಗಿ ಹೇಳಿದ್ದಾರೆ.