Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಭೆಯಲ್ಲಿ ತಜ್ಞರು ಏನು ಸಲಹೆ ಕೋಡ್ತಾರೆ?

ಸಭೆಯಲ್ಲಿ ತಜ್ಞರು ಏನು ಸಲಹೆ ಕೋಡ್ತಾರೆ?
ಬೆಂಗಳೂರು , ಸೋಮವಾರ, 25 ಏಪ್ರಿಲ್ 2022 (10:15 IST)
ಐಐಟಿ ಕಾನ್ಪುರದ ವರದಿಯ ಪ್ರಕಾರ ಜೂನ್ನಲ್ಲಿ ಕೊರೊನಾ ನಾಲ್ಕನೇ ಅಲೆಯ ಆತಂಕ ಶುರುವಾಗಲಿದೆ.

ಕರ್ನಾಟಕದ ನೆರೆ ರಾಜ್ಯದಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ನಿಧಾನಕ್ಕೆ ಕೇಸ್ಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇದು ಕರ್ನಾಟಕಕ್ಕೆ ಎಚ್ಚರಿಕೆ ಅಲಾರಂ ಆಗಿದೆ. 

ಮಾಸ್ಕ್ ಬಳಸೋದನ್ನು ಜನ ಮರೆತಿದ್ದಾರೆ. ಹೀಗಾಗಿ ಮಾಸ್ಕ್ ಜಾಗೃತಿ ಬಗ್ಗೆ ಸರ್ಕಾರಕ್ಕೆ ತಜ್ಞರ ತಂಡ ಸಲಹೆ ಕೊಡಲಿದೆ. ಸರ್ಕಾರಿ ಆಸ್ಪತ್ರೆಗಳು ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವೃ ನಿಗಾಕ್ಕೆ ಸೂಚನೆ ನೀಡಲಿದೆ.

ಯಾವ ದೇಶದಲ್ಲಿ ಕೊರೊನಾ ಹೆಚ್ಚಾಗಿದ್ಯೋ ಆ ದೇಶದಿಂದ ಬರುವ ಪ್ರಯಾಣಿಕರ ಬಗ್ಗೆ ಏರ್ಪೋರ್ಟ್ನಲ್ಲಿ ನಿಗಾ ಇಡಬೇಕು. ಟೆಸ್ಟಿಂಗ್ ನಿಧಾನಕ್ಕೆ ಹೆಚ್ಚಳ ಮಾಡುವಂತೆ ತಜ್ಞರಿಂದ ಸಲಹೆ ನೀಡುವ ಸಾಧ್ಯತೆಯಿದೆ.

ಓಮಿಕ್ರಾನ್ ಉಪತಳಿ ಬೇರೆ ರಾಜ್ಯದಲ್ಲಿ ಪತ್ತೆಯಾಗಿರುವುದರಿಂದ ಕರ್ನಾಟಕದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ಗೆ ಹೆಚ್ಚಳಕ್ಕೆ ಸೂಚನೆ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಗೆ ಟಿಕೆಟ್ ಜೊತೆ ಮೊಬೈಲ್ ನಂಬರ್ ಕೊಟ್ಟ ಕಾಮುಕ ಕಂಡಕ್ಟರ್!