Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ದಲಿತರ ಪರವಲ್ಲ, ಆರೆಸ್ಸೆಸ್ ಪರ: ಖರ್ಗೆ

ಮೋದಿ ದಲಿತರ ಪರವಲ್ಲ, ಆರೆಸ್ಸೆಸ್ ಪರ: ಖರ್ಗೆ
ಚಿಕ್ಕೋಡಿ , ಮಂಗಳವಾರ, 8 ಮೇ 2018 (17:30 IST)
ದಲಿತರ ಪರ ಮೋದಿ ಟ್ರಂಪ್ ಕಾರ್ಡ್‌ಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಲೋಕಸಭಾ ವಿರೋಧ ಪಕ್ಷದ ಮುಖಂಡ ಖರ್ಗೆ ಹೇಳಿಕೆ ನೀಡಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭ್ಯರ್ಥಿ ಗಣೇಶ ಹುಕ್ಕೇರಿ, ನಿಪ್ಪಾಣಿ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ಪರ ಖರ್ಗೆ ಮತಯಾಚನೆ ಮಾಡಿದರು., ಮೋದಿ ಅವರಿಗೆ ದಲಿತರ ಮೇಲೆ ನಿಜವಾದ ಪ್ರೀತಿಯೇ ಇಲ್ಲ, ಲೋಕಸಭೆಯಲ್ಲಿ ತನಗೆ ವಿರೋಧ ಪಕ್ಷದ ಸ್ಥಾನ ಮಾನಕ್ಕೆ ಮೋದಿ ವಿರೋಧಿಸಿದ್ದರು. ಒಬ್ಬ ‌ದಲಿತನಾಗಿರುವ ತನಗೆ ವಿರೋಧ ಪಕ್ಷದ ಸ್ಥಾನ ಮಾನಕ್ಕೆ ವಿರೋಧಿಸಿದ್ದರಿಂದ ಹಾಗಾಗಿ ದಲಿತರ ಪರ ಮಾತನಾಡುವ ನೈತಿಕತೆ ಮೋದಿಗೆ ಇಲ್ಲ,
 
ಈ ಬಾರಿ ನಡೆಯುತ್ತಿರುವ ಚುನಾವಣೆ ಬರಿ ಪಕ್ಷಗಳ ನಡುವಿನ ಚುನಾವಣೆ ಅಲ್ಲ. ಎರಡು ತತ್ವ ಸಿದ್ದಾಂತಗಳ ನಡುವಿನ ಚುನಾವಣೆ. ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಯಡಿಯೂರಪ್ಪ ಅವರನ್ನು ಘೋಷಣೆ ಮಾಡಿ, ಇದೀಗ ಮೋದಿ ಬಂದು ನನಗೆ ವೋಟ್ ನೀಡಿ ಅಂತಿದ್ದಾರೆ. ನಮಗೆ ಅರ್ಥವಾಗುತ್ತಿಲ್ಲ ಮೋದಿಯವರು ಇಲ್ಲಿಗೆ ಬಂದು ಮುಖ್ಯಮಂತ್ರಿಯಾಗುವವರಿದ್ದಾರಾ ಎಂದು ವ್ಯಂಗ್ಯವಾಡಿದರು.
 
ಬಿಜೆಪಿಯವರು ಸಾಲ ಮನ್ನಾ ಮಾಡಿ ಅಂದ್ರೆ ನಮ್ಮಲ್ಲಿ ನೋಟ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಅಂದ್ರು. ಆದ್ರೆ ನಾವು ಇವತ್ತು ಸಾಲ ಮನ್ನಾ ಮಾಡಿದ್ದೆವೆ. ದೇಶದಲ್ಲಿ ಹೂಡಿಕೆ ವಿಚಾರದಲ್ಲಿ ನಾವು ನಂ 1 ಸ್ಥಾನ ಪಡೆದಿದ್ದೇವೆ.. ಗುಜರಾತ್ ಮಾಡೆಲ್ ಅಂತಿದ್ದ ನೀವು ಹಿಂದೆ ಉಳಿದಿದ್ದಿರಿ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಆದ್ರೆ ಕರ್ನಾಟಕದಲ್ಲಿ ನಮ್ಮ ಸರ್ಕಾರ 55. ಲಕ್ಷ ಉದ್ಯೋಗ ನೀಡಿದ್ದೇವೆ ಎಂದು ಟಾಂಗ್ ನೀಡಿದರು. 
 
ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಯಡಿಯೂರಪ್ಪ ಜೈಲುಟ ಮಾಡಿ ಬಂದಿದ್ದಾರೆ ಅಂತಹವರನ್ನ ನೀವು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಿರಿ ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದರು.
 
ಮುಧೋಳ ನಾಯಿ ಜೋತೆ ನಮ್ಮನ್ನು ಹೋಲಿಸಿದ್ದಾರೆ ಆದ್ರೆ ಆರ್. ಎಸ್. ಎಸ್ ಮತ್ತು ಇವರ ಮನೆಯಲ್ಲಿ ಒಂದು ನಾಯಿ ಕೂಡಾ ದೇಶಕ್ಕಾಗಿ ಸತ್ತಿಲ್ಲ. ಕಾಂಗ್ರೆಸ್ ನಾಯಕರು ನಮ್ಮ ದೇಶಕ್ಕಾಗಿ ಸತ್ತಿದ್ದಾರೆ. ಇಂತವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದರು.
 
ಮಹದಾಯಿ ವಿಚಾರ ಬಗೆಹರಿಸಲು ನಿಮ್ಮಿಂದ ಆಗಿಲ್ಲಾಇಂದಿರಾಗಾಂಧಿ  ಕೃಷ್ಣಾ ನದಿ ನೀರಿನ ಸಮಸ್ಯೆ ಹೇಗೆ ಬಗೆ ಹರಿಸಿದ್ದಾರೆ ಹಾಗೆ ಮಹದಾಯಿ ನೀರಿನ ಸಮಸ್ಯೆ ಬಗೆ ಹರಿಸಲು ಮೋದಿಯವರಿಗೇನು ಧಾಡಿ ಆಗಿದೆಯಾ? ಚುನಾವಣೆ ಬಂದಾಗ ಈಗ ಮಹದಾಯಿ ವಿಚಾರ ಮಾತನಾಡುತ್ತಿದ್ದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ: ಪ್ರಧಾನಿ ಮೋದಿಯಿಂದ ರಾಜ್ಯದ ರೈತರಿಗೆ ಮೋಸ