Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಜನಪ್ರಿಯತೆಗೆ ಹೆದರಿ ಐಟಿ ದಾಳಿ ನಡೆಸಲಾಗುತ್ತಿದೆ: ಸಿಎಂ

ನನ್ನ ಜನಪ್ರಿಯತೆಗೆ ಹೆದರಿ ಐಟಿ ದಾಳಿ ನಡೆಸಲಾಗುತ್ತಿದೆ: ಸಿಎಂ
ಮೈಸೂರು , ಮಂಗಳವಾರ, 8 ಮೇ 2018 (16:11 IST)
ಬಾದಾಮಿಯಲ್ಲಿ ಸಿಎಂ ಉಳಿದಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ  ಪ್ರತಿಕ್ರಿಯೆ ನೀಡಿದ್ದಾರೆ. 
ಬಿಜೆಪಿಯಂತಹ ಮೂರ್ಖರು ಯಾರೂ ಇಲ್ಲ ಬಾದಾಮಿಯಲ್ಲಿ ನಾನು ವಾಸ್ತವ್ಯ ಹೂಡಿದ್ದ ರೆಸಾರ್ಟ್ ರೇಡ್ ಮಾಡಿದ್ದಾರೆ. ಐಟಿ ಇಲಾಖೆಯನ್ನ ನರೇಂದ್ರ ಮೋದಿ, ಅಮಿತ್ ಶಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾಮನ್ ಸೆನ್ಸ್ ಇದ್ಯಾ ಅವ್ರಿಗೆ, ನಾನ್ ದುಡ್ಡು ಅಲ್ಲೇ ಬಿಟ್ಟು ಬಂದಿದ್ದೀನಾ ನನಗೆ ಹೆದರಿ ಐಟಿ ಬಿಟ್ಟಿದ್ದಾರೆ. ಇದೊಂದು ನಾನ್ ಸೆನ್ಸ್ ವಿಚಾರ ಅಮಿತ್ ಶಾ ಉಳಿಸಿಕೊಂಡಿದ್ದ ರೂಂ ಯಾಕೆ ರೈಡ್ ಮಾಡಲ್ಲ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ
 
ಸಿಎಂ ಆಪ್ತ ಮರಿಸ್ವಾಮಿಗೌಡ ಮನೆ ರೈಡ್ ಆಯ್ತು ಅಂತಾರೆ ಎಲ್ಲಿ ರೈಡ್ ಆಗಿದೆ. ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಅಂತಾ ಬಿಜೆಪಿ ಮಂದಿಗೆ ಗೊತ್ತಾಗಿದೆ. ಹೀಗಾಗಿ ಹೆದರಿ ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.
 
ಈ ಬಾರಿ ರಾಜ್ಯದಲ್ಲಿ ನಾವೇ ಬಹುಮತದೊಂದಿಗೆ ಅಧಿಕಾರಕ್ಕೆ ಬರ್ತಿವೆ. ಕಾವೇರಿ ನದಿ ನೀರಿನ ವಿಚಾರ ಕೇಂದ್ರ ಸರ್ಕಾರ ಇರೋದು ಸುಪ್ರೀಂ ಆದೇಶ ಜಾರಿಗೆ ತರಲು ಕೇಂದ್ರ ಸರ್ಕಾರ ಮೊದಲು ಅದನ್ನು ಮಾಡಬೇಕು
 
ಕಾವೇರಿ ನದಿ ವಿಚಾರ ಸ್ಕಿಂ ಜಾರಿಗೆ ಮತ್ತೋಮ್ಮೆ ಒತ್ತಾಯಿಸಿದ ಸಿಎಂ, ಕಾಂಗ್ರೆಸ್ ಪಕ್ಷ ಶಕ್ತಿ ಕಳೆದುಕೊಳ್ಳುತ್ತಿದೆ ಹಾಗಾಗಿ ಸೋನಿಯಾಗಾಂಧಿ ರಾಜ್ಯದಲ್ಲಿ ಪ್ರವಾಸ ಮಾಡ್ತಾರೆ ಅನ್ನೋ ಬಿಜೆಪಿ ಹೇಳಿಕೆ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಿಎಂ, ಸೋನಿಯಾಗಾಂಧಿ ಯಾರು‌ ಅವರು ನಮ್ಮ ಪಕ್ಷದ ವರೀಷ್ಠರುಹಾಗಾದರೆ ಪ್ರಧಾನಿ ಮೋದಿ, ಅಮಿತ್ ಶಾ , ಯೋಗಿ ಆಧಿತ್ಯನಾಥ್ ಏನಕ್ಕೆ ಬರ್ತಾವರೆ. ಬಿಜೆಪಿ ಶಕ್ತಿ ಕುಂದಿದೆ ಅಂತ ಬರ್ತಿದ್ದಾರಾ ಎಂದು ತಿರುಗೇಟು ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚೈತ್ರಾ ಕುಂದಾಪುರ್ ಬಂಧನಕ್ಕೆ ಬಿಜೆಪಿ ಕಾರ್ಯಕರ್ತರ ಅಡ್ಡಿ