Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹದಾಯಿ: ಪ್ರಧಾನಿ ಮೋದಿಯಿಂದ ರಾಜ್ಯದ ರೈತರಿಗೆ ಮೋಸ

ಮಹದಾಯಿ: ಪ್ರಧಾನಿ ಮೋದಿಯಿಂದ ರಾಜ್ಯದ ರೈತರಿಗೆ ಮೋಸ
ಹುಬ್ಬಳ್ಳಿ , ಮಂಗಳವಾರ, 8 ಮೇ 2018 (17:26 IST)
ಪ್ರಧಾನಿ‌ ನರೇಂದ್ರ ಮೋದಿಯವರು ಮಹದಾಯಿ ವಿಷಯವನ್ನು ರಾಜಕೀಯ ಗೊಳಿಸುತ್ತಿದ್ದಾರೆ. ಪ್ರಧಾನಿಗಳಿಗೆ ಮಹದಾಯಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇನ್ನು 6 ತಿಂಗಳಲ್ಲಿ ಸಮಸ್ಯೆ ಇತ್ಯರ್ಥ ಮಾಡುವದಾಗಿ ಹೇಳುವ ಮೂಲಕ ಈ ಭಾಗದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸೇನಾ ಅಧ್ಯಕ್ಷ ವಿರೇಶ ಸೋಬರದಮಠ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದರು. 
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸ್ಥಳಿಯ ನಾಯಕರು ನೀಡಿದ ತಪ್ಪು ಮಾಹಿತಿಯನ್ನು ಪಕ್ಷದ ಪ್ರಚಾರ ಸಭೆಯಲ್ಲಿ ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಹದಾಯಿ ಅಂತಿಮ‌ ತೀರ್ಪು ಮೂರು ತಿಂಗಳಲ್ಲಿ ಹೊರಬಿಳಲಿದೆ. ಆದ್ರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿಗಳು ಕಾನೂನು ಜ್ಞಾನವಿಲ್ಲದೆ ಭಾಷಣ ಮಾಡುವದನ್ನು ನಿಲ್ಲಿಸಬೇಕು. ಮೂರು ತಿಂಗಳಲ್ಲಿ ನ್ಯಾಯಾಧಿಕರ ತೀರ್ಪು ಪ್ರಕಟಿಸಲಿದ್ದು, ಪ್ರಧಾನಿ ಮೋದಿಯವರು ಇನ್ನು 6 ತಿಂಗಳು ಬೇಕು ಎನ್ನುವುದು ಹಾಸ್ಯಸ್ಪದ ಎಂದು ವಾಗ್ದಾಳಿ ನಡೆಸಿದರು.
 
ಈಗಾಗಲೇ ಮಹದಾಯಿ‌ ಹೋರಾಟಗಾರರು ದೆಹಲಿ ಚಲೋ ಚಳವಳಿ ಮಾಡಿ ರಾಷ್ಟ್ರಪತಿಗಳ ಪ್ರಧಾನ ಕಾರ್ಯದರ್ಶಿಗೆ ಮಹದಾಯಿ ಸಮಸ್ಯೆ ತಿಂಗಳೊಳಗಾಗಿ ಬಗೆಹರಿಸಿ ಇಲ್ಲವಾದ್ರೆ ದಯಮರಣೆ ಒಪ್ಪಿಗೆ ನೀಡುವಂತೆ 223 ಜನ ಒಪ್ಪಿ ಮನವಿ ಸಲ್ಲಿಸಿದ್ದೇವೆ ಎಂದರು.
 
ಮಹದಾಯಿ ಸಮಸ್ಯೆಗೆ ನಿರ್ಲಕ್ಷ್ಯ ತೋರಿದ ಮೂರು ಪಕ್ಷಗಳಿಗೆ ಮತದಾನ ‌ಮಾಡದಿರಲು ತೀರ್ಮಾನಿಸಲಾಗಿದ್ದು, ನೋಟಾ ಮತದಾನ ಮಾಡಲು ನಿರ್ಧಾರ ತಗೆದುಕೊಂಡು ಈಗಾಗಲೇ ಜನಾಂದಲೋನ ಆರಂಭಿಸಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾದಾಮಿ ಐಟಿ ದಾಳಿ ಪ್ರಕರಣ ಹಿನ್ನೆಲೆ ಸಿಎಂ ಇಬ್ರಾಹಿಂ ಟಾಂಗ್