ವಾಹನದ ಹಿಂಬದಿ ನಂಬರ್ ಪ್ಲೇಟ್ಗೆ ಮಾಸ್ಕ್, ಮುಂದೇಕಿಲ್ಲ ಎಂದು ಪ್ರಶ್ನಿಸಿದರೆ,
ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವ ವೇಳೆ ನಮಗೆ ತಿಳಿಯದೆಯೇ ಹಿಂಬದಿಯಿಂದ ಪೊಲೀಸರು ತಮ್ಮ ವಾಹನದ ನಂಬರ್ ಪ್ಲೇಟ್ನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಯದ್ವತದ್ವ ದಂಡ ಹಾಕುತ್ತಿದ್ದಾರೆ.
ವಾಹನದ ಡೀಟೈಲ್ಸ್ ಚೆಕ್ ಮಾಡಿದರೆ ಹೆಲ್ಮೆಟ್ ಧರಿಸಿಲ್ಲ, ನಂಬರ್ ಸರಿಯಾಗಿ ಗೋಚರಿಸಿಲ್ಲ, ಸಿಗ್ನಲ್ ಜಂಪ್, ತ್ರಿಬಲ್ ರೈಡ್ ಹೀಗೆ ಹಲವಾರು ರೀತಿಯಲ್ಲಿ ದಂಡ ಕಟ್ಟಿದ್ದೇವೆ. ಒಂದೇ ಬಾರಿಗೆ ಮೂರ್ನಾಲ್ಕು ಸಾವಿರ ದಂಡ ಕಟ್ಟುವುದಾದರೂ ಹೇಗೆ? ಅದಕ್ಕಾಗಿಯೇ ಈ ಮಾರ್ಗ ಅನುಸರಿಸುತ್ತಿದ್ದೇವೆ ಎಂಬುದು ವಾಹನ ಸವಾರರ ಮಾತು.
ವಾಹನಗಳಿಗೆ ಶುಲ್ಕ ವಿಧಿಸುವ ಮುನ್ನ ಗಮನಕ್ಕೆ ತರುವ ಕೆಲಸ ಇಲಾಖೆಯಿಂದ ಆಗಬೇಕಿದ್ದು, ವಾಹನ ಮಾಲೀಕರ ಗಮನಕ್ಕೆ ತಂದು, ಎಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಮನವರಿಕೆ ಮಾಡಿದ ನಂತರ ದಂಡ ಹಾಕಲಿ ಎಂಬುದು ಕೆಲ ವಾಹನ ಸವಾರರ ಮನವಿಯಾಗಿದೆ.