ಹೈದರಾಬಾದ್: ಲಿಂಗ ಪರಿವರ್ತನೆ ಮಾಡುತ್ತೇವೆಂದು ಇಬ್ಬರು ಬಿ ಫಾರ್ಮ್ ವಿದ್ಯಾರ್ಥಿಗಳು ಯುವಕನೋರ್ವನ ಸಾವಿಗೆ ಕಾರಣವಾದ ಘಟನೆ ನಡೆದಿದೆ.
ಬಿ ಫಾರ್ಮ್ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಶಸ್ತ್ರಚಿಕಿತ್ಸೆಗಾಗಿ 28 ವರ್ಷದ ಯುವಕನನ್ನು ಮುಂಬೈಗೆ ಕರೆದೊಯ್ದಿದ್ದರು. ಇಲ್ಲಿ ಲಾಡ್ಜ್ ಒಂದರಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಶಸ್ತ್ರಚಿಕಿತ್ಸೆ ಮಾಡುವುದಾಗಿ ಯೂ ಟ್ಯೂಬ್ ನೋಡಿಕೊಂಡು ಪ್ರಯೋಗ ನಡೆಸಿದರು.
ಆದರೆ ಈ ಮಧ್ಯೆ ಎಡವಟ್ಟಾಗಿದ್ದು, ಯುವಕ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.