Publish Date: Fri, 02 Nov 2018 (06:39 IST)
Updated Date: Fri, 02 Nov 2018 (06:41 IST)
ಇಟಾ : ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಇಟಾದಲ್ಲಿ ನಡೆದಿದೆ.
ನರೇಂದ್ರ (22 ವರ್ಷ) ಹಲ್ಲೆಗೊಳ್ಳಗಾದ ಯುವಕನಾಗಿದ್ದು, ಇತ ಹಾಗೂ ರಶ್ಮಿ ಎಂಬಾಕೆ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ರಶ್ಮಿಯ ಮನೆಯವರಿಗೆ ತಿಳಿದು ಮದುವೆ ಮಾತುಕತೆ ನಡೆಸುವುದಾಗಿ ಯುವಕನನ್ನು ಮನೆಗೆ ಕರೆಸಿ ಕೊಠಡಿಯಲ್ಲಿ ಕೂಡಿ ಹಾಕಿ ಆತನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ನರೇಂದ್ರನ ಚೀರಾಟ ಕೇಳಿದ ನೆರೆಯವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ದೇಹ ಶೇ 90ರಷ್ಟು ಸುಟ್ಟಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ