ಬೆಂಗಳೂರು : ಗುಟ್ಟಾಗಿ ಮದುವೆಯಾಗಿದ್ದ ನಟಿ ಶೃತಿ ಹರಿಹರನ್ ಇದೀಗ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಲೈಂಗಿಕ ಕಿರುಕುಳದ ದೂರಿನ ಪ್ರತಿಯ ಮೂಲಕ ತಾವು ಮದುವೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೌದು, ಶನಿವಾರ ನಟಿ ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಈ ಮೂಲಕ ಅವರು ಮದುವೆಯಾಗಿರುವುದು ಖಚಿತವಾಗಿದೆ.
ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಈ ಹಿಂದೆ ಶೃತಿ ರಾಮ್ ಕುಮಾರ್ ಜತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವ ವಿಚಾರ ಹೇಳದೆ ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಇದೀಗ ಮೀಟೂ ವಿಚಾರವಾಗಿ ಈ ವಿಚಾರವೂ ಬಹಿರಂಗವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.