ಚೆನ್ನೈ : ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಇಂಡಿಯಾ ಅಡಿ ನಿರ್ಮಾಣವಾಗುತ್ತಿರುವ ಲೈಟ್ಹೌಸ್ ಯೋಜನೆಯನ್ನು ಇಂದು ಪ್ರಧಾನ ಮಂತ್ರಿ ಪರಿಶೀಲನೆ ನಡೆಸಿದರು. ವಿಶೇಷ ಎಂದರೆ ದೇಶಾದ್ಯಂತ ನಿರ್ಮಾಣವಾಗುತ್ತಿರುವ ಈ ಯೋಜನೆಯನ್ನು ಅವರು ಡ್ರೋಣ್ಗಳ ಮೂಲಕ ಪರಿಶೀಲಿಸಿದರು.
ಜನವರಿ 1 ರಂದು ಪ್ರಧಾನಿ ಈ ಲೈಟ್ ಹೌಸ್ ಯೋಜನೆಗೆ ಚಾಲನೆ ನೀಡಿದ್ದರು. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಈ ವಸತಿ ಯೋಜನೆ ರೂಪಿಸಲಾಗುತ್ತಿದೆ. ದೇಶದ ಆರು ರಾಜ್ಯಗಳಲ್ಲಿ ಈ ಅಗ್ಗದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಕಡಿಮೆ ಅವಧಿ ಅಂದರೆ ವರ್ಷದೊಳಗೆ ಈ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮನೆಗಳನ್ನು ಉತ್ತಮ ಗುಣಮಟ್ಟದ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಜರ್ಮನಿ, ಫ್ರಾನ್ಸ್ ಮತ್ತು ಕೆನಡಾದಲ್ಲಿ ಇಂತಹ ಆಧುನಿಕ ಪದ್ಧತಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.
ಮಧ್ಯಪ್ರದೇಶದ ಇಂದೋರ್ , ಗುಜರಾತ್ನ ರಾಜ್ಕೋಟ್, ತಮಿಳುನಾಡಿನ ಚೆನ್ನೈ, ಜಾರ್ಖಂಡ್ನ ರಾಂಚಿ , ತ್ರಿಪುರದ ಅಗರ್ತಲಾ ಮತ್ತು ಉತ್ತರ ಪ್ರದೇಶದ ಲಕ್ನೋ ನಲ್ಲಿ ಈ ಲೈಟ್ ಹೌಸ್ ಯೋಜನೆಯ ಮನೆಗಳನ್ನು ನಿರ್ಮಿಸಲಾಗುತ್ತಿದೆ.