Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಡ್ರೋಣ್ ತಯಾರಿಸಿದ್ದೇನೆ ಎಂದು ಜನರನ್ನು ನಂಬಿಸಿದ್ದ ಮಂಡ್ಯದ ‘ಡ್ರೋಣ್’ ಪ್ರತಾಪ್ ಎಂಬಾತನ ವಿಚಾರ ಈಗ ಟ್ವಿಟರ್ ನಲ್ಲೂ ಸದ್ದು ಮಾಡಿದೆ.
ಡ್ರೋಣ್ ಪ್ರತಾಪ್ ಬಗ್ಗೆ ಖಾಸಗಿ ವಾಹಿನಿಯೊಂದು ಸಂದರ್ಶನ ನಡೆಸಿದೆ. ಈ ವೇಳೆ ಡ್ರೋಣ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳಲ್ಲಿ 7000 ರಿಸರ್ಚ್ ಪೇಪರ್ ಓದಿದ್ದೇನೆ, ನಾನು ಸುಳ್ಳು ಹೇಳಿಲ್ಲ ಎಂದೆಲ್ಲಾ ಸಮರ್ಥಿಸಿಕೊಂಡಿದ್ದಾನೆ.
ಆತನ ಸಂದರ್ಶನ ನೋಡಿದ ಬಳಿಕ ಟ್ವಿಟರಿಗರು ಆತನ ಬಗ್ಗೆ ಚರ್ಚೆ ಮಾಡಿದ್ದು, ಯಾವುದೇ ಸಂಶೋಧನೆ ವಿದ್ಯಾರ್ಥಿಗೂ ಆಗದ ಕೆಲಸ ಈತನಿಗೆ ಸಾಧ್ಯವಾಯಿತು ಎಂದರೆ ನಿಜಕ್ಕೂ ಈತ ಅದ್ಭುತ ಮನುಷ್ಯನೇ ಇರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಹಲವರು ಮೆಮೆಗಳ ಮೂಲಕವೂ ಡ್ರೋಣ್ ಪ್ರತಾಪ್ ನ ಟ್ರೋಲ್ ಮಾಡುತ್ತಿದ್ದಾರೆ.