Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ
ನವದೆಹಲಿ , ಶನಿವಾರ, 8 ಅಕ್ಟೋಬರ್ 2022 (10:59 IST)
ನವದೆಹಲಿ : ಶೀಘ್ರದಲ್ಲೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯು ಇ-ರೂಪಾಯಿಯನ್ನು ಪ್ರಾಯೋಗಿಕ ಬಳಕೆ ಪ್ರಾರಂಭಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತಿಳಿಸಿದೆ.

ಆರ್ಬಿಐ ಮತ್ತು ಸಿಬಿಡಿಸಿ ಈಗಾಗಲೇ ಡಿಜಿಟಲ್ ಕರೆನ್ಸಿ ಕುರಿತಾಗಿ ಹಲವು ಪ್ರಾಯೋಗಿಕ ಕೆಲಸಗಳಿಗೆ ಕೈ ಹಾಕಿದ್ದು, ಕರೆನ್ಸಿಗಳ ಬಗ್ಗೆ ಮತ್ತು ನಿರ್ದಿಷ್ಟವಾಗಿ ಡಿಜಿಟಲ್ ರೂಪಾಯಿಯ ಯೋಜಿತ ವೈಶಿಷ್ಟ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈಗಿನಿಂದಲೇ ಪ್ರಯತ್ನಿಸುತ್ತಿದೆ.

ನಿರ್ದಿಷ್ಟ ಬಳಕೆಗಾಗಿ ಸಿಬಿಡಿಸಿ ಇ-ರೂಪಾಯಿಯ ಪ್ರಾಯೋಗಿಕ ಬಳಕೆಯನ್ನು ಪ್ರಾರಂಭಿಸಲಿದೆ ಎಂದು ಆರ್ಬಿಐ ತಿಳಿಸಿದೆ. ಪ್ರಾಯೋಗಿಕ ಯೋಜನೆಗಳ ವ್ಯಾಪ್ತಿ ವಿಸ್ತರಿಸಿದಂತೆ, ಕಾಲಕಾಲಕ್ಕೆ ಡಿಜಿಟಲ್ ರೂಪಾಯಿಯ ನಿರ್ದಿಷ್ಟ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತು ಆರ್ಬಿಐ ಮಾಹಿತಿ ಪಡೆದುಕೊಂಡು ಇ-ರೂಪಾಯಿ ಕುರಿತಾಗಿ ದೇಶದಲ್ಲಿ ಮತ್ತಷ್ಟು ಕಾರ್ಯರೂಪಗಳೊಂದಿಗೆ ಜಾರಿಗೆ ತರಲು ಚಿಂತಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ, ಕಾಲೇಜು ನೌಕರರಿಂದ ಬೃಹತ್ ಪಾದಯಾತ್ರೆ