ನವದೆಹಲಿ : ವಿಶ್ವಾದ್ಯಂತ ಭಾರೀ ಆತಂಕ ಹುಟ್ಟಿಸಿದ ಒಮಿಕ್ರೋನ್ ಮತ್ತು ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾತಳಿಗಳಿಗೆ ಕೊವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
ಈ ಸಂಬಂಧ ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಮೊದಲೆರಡು ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಪಡೆದವರಲ್ಲಿ ಕೊರೋನಾದ ಒಮಿಕ್ರೋನ್ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.