Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಒಮಿಕ್ರಾನ್ ಸೋಂಕು ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಯಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ದೇಶದಲ್ಲಿ ಇಂದಿನಿಂದ ಬೂಸ್ಟರ್ ಡೋಸ್ ಆನ್ನು ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ 60 ವರ್ಷ ಮೇಲ್ಪಟ್ಟ ವಯೋಮಾನದ ಜನರಿಗೆ ಕೊಡಲಾಗುತ್ತಿದೆ.
ಕೇಂದ್ರ ಆರೋಗ್ಯ ಇಲಾಖೆಯೂ ಈಗಾಗಲೇ ಹೆಚ್ಚುವರಿ ಡೋಸ್ ಪಡೆಯಲು ನೊಂದಣಿ ಕಾರ್ಯ ಶುರು ಮಾಡಿದೆ. ಇಂದಿನಿಂದ ಪ್ರೈಮರಿ ಹೆಲ್ತ್ ಸೆಂಟರ್‌ಗಳಲ್ಲಿ ಅರ್ಹರಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತದೆ. ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ ಡಬಲ್ ಡೋಸ್ ಪಡೆದ ನಂತರ ತೆಗೆದುಕೊಳ್ಳೋದಕ್ಕೆ ಬೂಸ್ಟರ್ ಡೋಸ್ ಎನ್ನಲಾಗಿದೆ.