Publish Date: Tue, 11 Jan 2022 (09:22 IST)
Updated Date: Tue, 11 Jan 2022 (09:24 IST)
ಕೇವಲ ಐದೇ ದಿನದಲ್ಲಿಯೇ 5,263 ಮಕ್ಕಳಿಗೆ ಕೊರೊನಾ ತಗುಲಿದೆ.
ಜನವರಿ 5ರಿಂದ 19ರವರೆಗೆ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ.
ಆದ್ರೆ ಮನೆಯಲ್ಲಿದ್ದರೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಜನವರಿ 1ರಂದು ನಗರದಲ್ಲಿ ಕೇವಲ 99 ಮಕ್ಕಳಿಗೆ ಸೋಂಕು ತಗುಲಿತ್ತು ಆದರೆ ಈಗ 5,263 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.