ಬೆಂಗಳೂರು : ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಕಳವಳಕಾರಿಯಾಗಿದೆ.
ನಾಡಿನ ಮುಖ್ಯಮಂತ್ರಿಗೇ ಕೊರೊನಾ ಬಂದಿದ್ದು, ರಾಜಧಾನಿಯ ಪರಿಸ್ಥಿಯೂ ಆತಂಕಕಾರಿಯಾಗಿದೆ. ಇಡೀ ರಾಜ್ಯದಲ್ಲಿ ಕೊರೊನಾ ಹೇಗಿದೆ ಎಂದು ನೋಡಿದಾಗ ಬೆಂಗಳೂರಿನಲ್ಲಿಯೇ ಸೋಂಕು ಪ್ರಮಾಣ ಅಧಿಕವಾಗಿದೆ.
ಅದರಲ್ಲೂ ಮಹಾದೇವಪುರ ವಿಧಾನಸಭಾ ಕ್ಷೇತ್ರವೇ ಕೋವಿಡ್ ಟಾಪ್ ಒನ್ ಕ್ಷೇತ್ರವಾಗಿದೆ. 5,792 ಆಕ್ಟಿವ್ ಕೇಸ್ ಗಳು ಈ ಕ್ಷೇತ್ರದಲ್ಲಿವೆ. ಟಾಪ್ ಸೆಕೆಂಡ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿದೆ.
ಈ ಮಧ್ಯೆ ಮಕ್ಕಳನ್ನೂ ಹೆಚ್ಚಾಗಿ ಬಾಧಿಸುತ್ತಿದೆ ಈ ಮಹಾಮಾರಿ ಕೊರೊನಾ. ಇದನ್ನೆಲ್ಲಾ ನೋಡಿದರೆ ಬೆಂಗಳೂರಿಗೆ ಲಾಕ್ಡೌನ್ ಅನಿವಾರ್ಯತೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಮುಂದೆ ನುಗ್ಗಿದೆ. ಪಾಸಿಟಿವಿಟಿ ರೇಟ್ 13% ಕ್ಕೆ ಏರಿಕೆಯಾಗಿದೆ. ನಿನ್ನೆ 70 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ 9221 ಜನ ಸೋಂಕಿತರು ಪತ್ತೆಯಾಗಿದ್ದಾರೆ.