Publish Date: Tue, 20 Jun 2023 (09:50 IST)
Updated Date: Tue, 20 Jun 2023 (09:52 IST)
ಪ್ಯಾರಿಸ್ : ಭಾರತದ ಕಂಪನಿ ನಿರ್ಮಿಸಿದ ವಿಶ್ವದಾಖಲೆಯನ್ನು ಭಾರತದ ಕಂಪನಿ ಮುರಿಯವುದು ಬಹಳ ಅಪರೂಪ. ಈಗ ಇಂಡಿಗೋ ಕಂಪನಿ ಏರ್ ಇಂಡಿಯಾ ನಿರ್ಮಿಸಿದ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಹೌದು. ಬಜೆಟ್ ಕ್ಯಾರಿಯರ್ ವಿಮಾನ ಕಂಪನಿ ಇಂಡಿಗೋ ಫ್ರಾನ್ಸಿನ ಏರ್ಬಸ್ ಕಂಪನಿಯ ಜೊತೆ 500 A320 ಮಾದರಿಯ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಮೂಲಕ ಅತಿ ಹೆಚ್ಚು ವಿಮಾನ ಖರೀದಿ ಒಪ್ಪಂದ ಮತ್ತು ಒಂದೇ ಕಂಪನಿಯ ಜೊತೆ ಅತಿ ಹೆಚ್ಚು ವಿಮಾನ ಖರೀದಿ ನಡೆಸುತ್ತಿರುವ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಇಂಡಿಗೋ ಪಾತ್ರವಾಗಿದೆ.