ವಾಷಿಂಗ್ಟನ್ : ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳುವ ಮೂಲಕ ಅಮೆರಿಕ ನೆಲದಲ್ಲೇ ಅಮೆರಿಕ್ಕೆ ತಿರುಗೇಟು ನೀಡಿದ್ದಾರೆ.
ಹೌದು. ಅಮೆರಿಕದ ಜನಪ್ರತಿನಿಧಿಗಳು ಭಾರತದ ಪರಿಸ್ಥಿತಿಯ ಬಗ್ಗೆ ಮಾತನಾಡುವುದು ಹೊಸದೆನಲ್ಲ. ಆದರೆ ಭಾರತ ಸರ್ಕಾರದ ಪ್ರತಿನಿಧಿಯಾದ ಜೈ ಶಂಕರ್ ಅವರು ಅಮೆರಿಕ ನೆಲದಲ್ಲೇ ಅಮೆರಿಕದ ಬಗ್ಗೆ ಮಾತನಾಡಿದ್ದಾರೆ.
ಈ ಮೂಲಕ ನಮ್ಮ ದೇಶದ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದರೆ ನಮಗೂ ನಿಮ್ಮ ಬಗ್ಗೆ ಧೈರ್ಯವಾಗಿ ಬಹಿರಂಗವಾಗಿ ಹೇಳಲು ಬರುತ್ತದೆ ಎಂಬ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಭಾರತ ಮತ್ತು ಅಮೆರಿಕದ ಮಧ್ಯೆ ನಡೆದ ಮಾತುಕತೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸಿಲ್ಲ. ಈ ಸಭೆಯಲ್ಲಿ ಮುಖ್ಯವಾಗಿ ರಾಜಕೀಯ-ಮಿಲಿಟರಿ ವಿಷಯಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಎಂದು ಸ್ಪಷ್ಟಪಡಿಸಿದರು. ಜನರು ಭಾರತದ ಬಗ್ಗೆ ಕಲ್ಪನೆಗಳನ್ನು ಹೊಂದಬಹುದು.
ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ. ಭಾರತದ ಬಗ್ಗೆ ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದು ನೇರವಾಗಿ ಜೈಶಂಕರ್ ಹೇಳಿದ್ದಾರೆ.