Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೈಲ ಖರೀದಿ ಬಗ್ಗೆ ಜೈಶಂಕರ್ ಹೇಳಿದ್ದೇನು?

ತೈಲ ಖರೀದಿ ಬಗ್ಗೆ ಜೈಶಂಕರ್  ಹೇಳಿದ್ದೇನು?
ವಾಷಿಂಗ್ಟನ್ , ಗುರುವಾರ, 14 ಏಪ್ರಿಲ್ 2022 (08:13 IST)
ವಾಷಿಂಗ್ಟನ್ : ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಖರೀದಿಸುತ್ತಿರುವ ಕುರಿತು ಪ್ರಶ್ನಿಸಿದ ವಿದೇಶಿ ಪತ್ರಕರ್ತನಿಗೆ ಭಾರತ ವಿದೇಶಾಂಗ ಸಚಿವ ಜೈಶಂಕರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಯೂರೋಪ್ ರಷ್ಯಾದಿಂದ ಅರ್ಧ ದಿನಕ್ಕೆ ಖರೀದಿಸುವಷ್ಟು ಪ್ರಮಾಣದ ತೈಲವನ್ನು ಭಾರತ ಒಂದು ತಿಂಗಳ ಅವಧಿಗೆ ಖರೀದಿಸುತ್ತದೆ ಎಂದು ಉತ್ತರಿಸುವ ಮೂಲಕ ಪತ್ರಕರ್ತನಿಗೆ ಟಾಂಗ್ ಕೊಟ್ಟಿದ್ದಾರೆ. 

ಭಾರತ ಮತ್ತು ಅಮೆರಿಕ ನಡುವೆ ನಡೆದ 2+2 ಸಭೆಯಲ್ಲಿ ಮಾತನಾಡಿದ ಅವರು, ನೀವು ತೈಲ ಖರೀದಿಯನ್ನು ಉಲ್ಲೇಖಿಸುವುದನ್ನು ನಾನು ಗಮನಿಸಿದ್ದೇನೆ.

ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಯುರೋಪ್ ಕಡೆಗೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಬಹುಶಃ ನಾವು ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತೇವೆ.

ಆದರೆ ಅಂಕಿಅಂಶಗಳನ್ನು ನೋಡುವಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಯು ಯುರೋಪ್ನ ಅರ್ಧ ದಿನಕ್ಕಿಂತಲೂ ಕಡಿಮೆಯಿರಬಹುದು. ಆದ್ದರಿಂದ ನೀವು ಅದರ ಬಗ್ಗೆ ಯೋಚಿಸಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಚ್ಚರಿ ! ಉಡದ ಮೇಲೆ ಅತ್ಯಾಚಾರ