ವಾಷಿಂಗ್ಟನ್ : ಯುನೈಟೆಡ್ ಕಿಂಗ್ಡಮ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ.
2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ.
ಈಗಾಗಲೇ ಕೋವಿಡ್ ನೀಡಿದ ಹೊಡೆತದಿಂದ ಪಾರಾಗಲು ಹೆಣಗಾಡುತ್ತಿರುವ ಇಂಗ್ಲೆಂಡ್ಗೆ ಈ ವರದಿ ಮತ್ತಷ್ಟು ಹೊಡೆತ ನೀಡಿದೆ.
ಡಾಲರ್ ವಿನಿಮಯ ದರವನ್ನು ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ ಗಾತ್ರವು 854.7 ಬಿಲಿಯನ್ ಡಾಲರ್ ಆಗಿದ್ದರೆ ಯುಕೆ ಆರ್ಥಿಕತೆ 816 ಬಿಲಿಯನ್ ಡಾಲರ್ ಆಗಿದೆ ಎಂದು ವರದಿ ತಿಳಿಸಿದೆ.