Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಗುರುವಾರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,033 ಮಂದಿಗೆ ಕೊರೊನಾ ಬಂದರೆ 43 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೆ ಕೋವಿಡ್ನಿಂದಾಗಿ ಭಾರತದಲ್ಲಿ ಒಟ್ಟು 5,21,530 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 11,639 ರಷ್ಟಿದೆ. ಪಾಸಿಟಿವಿಟಿ ದರ ಶೇ.0.21 ಇದೆ. ಕಳೆದ ವಾರ ಶೇ.0.22 ಇತ್ತು. ಇಲ್ಲಿಯವರೆಗೆ 4,24,98,789 ಮಂದಿ ಗುಣಮುಖರಾಗಿದ್ದಾರೆ.
ಆರೋಗ್ಯ ಸಚಿವಾಲಯ ಹೊರಡಿಸಿದ ಅಂಕಿಅಂಶಗಳ ಪ್ರಕಾರ, ಇದುವರೆಗೆ 79.25 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,24,98,789 ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ವರದಿಯಾಗಿದೆ.