ಮುಂಬೈ : ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ ಎಕ್ಸ್ಇ ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ ವರದಿ ಮಾಡಿದ ಒಂದು ದಿನದ ಬಳಿಕ,
ಎಕ್ಸ್ಇ ವೇರಿಯಂಟ್ ಪತ್ತೆಯಾಗಿಲ್ಲವೆಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಹೊಸ ತಳಿ ಪತ್ತೆಯಾಗಿರುವ ಬಗ್ಗೆ ಯಾವುದೇ ದೃಢೀಕರಣವನ್ನು ಸ್ವೀಕರಿಸಿಲ್ಲ.
ಆದ್ದರಿಂದ ಎಕ್ಸ್ಇ ಪತ್ತೆಯಾಗಿರುವುದು ಕಂಡುಬಂದಿಲ್ಲ. ಮಾಹಿತಿ ಪ್ರಕಾರ ಎಕ್ಸ್ಇ ತಳಿಯು ಕೊರೊನಾ ರೂಪಾಂತರಿ ಓಮಿಕ್ರಾನ್ಗಿಂತಲೂ ಶೇ.10 ರಷ್ಟು ಹೆಚ್ಚು ಸೋಂಕನ್ನು ಹರಡುತ್ತದೆ.
ಹಾಗಾಗಿ ನಾವು ಎನ್ಐಬಿ ಯಿಂದ ಮಹಾರಾಷ್ಟ್ರ ವರದಿ ಪಡೆದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರಾಜೇಶ್ ಟೋಪೆ ಹೇಳಿದ್ದಾರೆ.