ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್, 300 ಶತಕೋಟಿ ಡಾಲರ್.ಅಂದ್ರೆ 22.50 ಲಕ್ಷ ಕೋಟಿ ರೂಪಾಯಿ ಆಸ್ತಿ ಹೊಂದಿರುವ ವಿಶ್ವದ ಮೊದಲ ಧನಿಕ ಎನ್ನಿಸಿಕೊಂಡಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ. ಮಸ್ಕ್ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್ ಮೀರಿದೆ. ಇದು 22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ 280 ಶತಕೋಟಿ ಡಾಲರ್ ಜಿಡಿಪಿಗಿಂತ ಹೆಚ್ಚಿದೆ. ಅಂದ್ರೆ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್ ಆಸ್ತಿಯೇ ಹೆಚ್ಚು ಅಂತ ತಿಳಿದುಬಂದಿದೆ.