Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೆಕ್ಕಿಗಳು ಹಾಗೂ ಉದ್ಯಮಿಗಳ ಮಕ್ಕಳಿಗೆ ಮಾದಕ ವಸ್ತು ಮಾರಾಟ

ಟೆಕ್ಕಿಗಳು ಹಾಗೂ ಉದ್ಯಮಿಗಳ ಮಕ್ಕಳಿಗೆ ಮಾದಕ ವಸ್ತು ಮಾರಾಟ
bangalore , ಶುಕ್ರವಾರ, 8 ಅಕ್ಟೋಬರ್ 2021 (20:47 IST)
ಕೊಡಿಗೇಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು,
ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಮಾದಕ ನಿಗ್ರಹ ದಳದ (ಸಿಸಿಬಿ) ಪೆÇಲೀಸರು ಬಂಧಿಸಿದ್ದಾರೆ. 
ನೈಜೀರಿಯಾ ಮೂಲದ ಅಗುಂಟಾ ಚುಕುವಾಕಾ ಡ್ಯಾನಿಲ್(24) ಮತ್ತು ಕಾವಲ್ ಭೈರಸಂದ್ರದ ಮೊಹಮ್ಮದ್ ಜೈದ್(30) ಬಂಧಿತರು. ಮತ್ತೊಬ್ಬ ಅರೋಪಿ ಲಕ್ಕಸಂದ್ರದ ಮೊಹಮ್ಮದ್ ಅಸ್ಲಾಂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಬಂಧಿತ ಆರೋಪಿಗಳಿಂದ ಮೂರು ಲಕ್ಷ ರೂ. ಮೌಲ್ಯದ 46 ಎಂಡಿಎಂಎ ಎಕ್ಸಟೆಸಿ ಮಾತ್ರೆಗಳು, ಎರಡು ಮೊಬೈಲ್, ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಸಹಕಾರ ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಕೆಲವು ಉದ್ಯಮಿಗಳ ಮಕ್ಕಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 
ಆರೋಪಿಗಳ ಪೈಕಿ ನೆಜೀರಿಯಾ ಪ್ರಜೆ ಅಗುಂಟಾ ಚುಕುವಾಕಾ ಡ್ಯಾನಿಲ್, ಕಳೆದ ಏಪ್ರಿಲ್‍ನಲ್ಲಿ ಕೊಕೇನ್ ಮಾರಾಟದ ವೇಳೆ ಕೊತ್ತನೂರು ಠಾಣೆ ಪೆÇಲೀಸರಿಗೆ ಸಿಕ್ಕಿಬಿದ್ದು, ಜೈಲು ಸೇರಿದ್ದ. ಇದೀಗ ಜೈಲಿನಿಂದ ಬಿಡುಗಡೆಯಾಗಿ ಬಂದು ಮತ್ತೆ ಅದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ದೆಹಲಿಯಲ್ಲಿರುವ ತನ್ನ ದೇಶದ ಪ್ರಜೆ ಮೂಲಕ ಮಾದಕ ವಸ್ತು ತರಿಸಿ ತನ್ನ ಸಹಚರರ ಜತೆ ಸೇರಿಕೊಂಡು ನಗರದಲ್ಲಿ ಮಾರಾಟ ಮಾಡತ್ತಿದ್ದ ಎಂದು ಪೆÇಲೀಸರು ಹೇಳಿದರು.
ಸದ್ಯ ಆರೋಪಿಗಳ ವಿರುದ್ಧ ಕೊಡಿಗೇಹಳ್ಳಿ ಪೆÇಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕದ್ದು ತಂದ ಆನೆ ದಂತಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸಲು ಯತ್ನ