Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಲೇಜಿನಲ್ಲಿ ಹಿಜಬ್ ಬ್ಯಾನ್!?

ಕಾಲೇಜಿನಲ್ಲಿ ಹಿಜಬ್ ಬ್ಯಾನ್!?
ಲಕ್ನೋ , ಭಾನುವಾರ, 20 ಫೆಬ್ರವರಿ 2022 (09:06 IST)
ಲಕ್ನೋ : ಕರ್ನಾಟಕದ ಉಡುಪಿಯಿಂದ ಆರಂಭವಾದ ಹಿಜಬ್ ವಿವಾದ ಈಗ ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲೂ ಪ್ರತಿಧ್ವನಿಸಿದೆ.
 
ಅಲಿಗಢ ಧರ್ಮ ಸಮಾಜ ಕಾಲೇಜು ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದೆ. ಕಾಲೇಜು ನಿಗದಿ ಪಡಿಸಿದ ಸಮವಸ್ತ್ರವನ್ನೇ ಎಲ್ಲ ವಿದ್ಯಾರ್ಥಿಗಳು ಧರಿಸಬೇಕು ಎಂದು ಹೇಳಿದೆ.

ಹಿಜಬ್ ಅಥವಾ ಕೇಸರಿ ವಸ್ತ್ರವನ್ನು ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದು ಧರ್ಮ ಸಮಾಜ ಕಾಲೇಜು ಆಡಳಿತ ಮಂಡಳಿ ಗುರುವಾರ ನೋಟಿಸ್ ಬೋರ್ಡ್ನಲ್ಲಿ ಸೂಚನೆಯನ್ನು ಪ್ರಕಟಿಸಿದೆ.

ಪ್ರತಿಭಟನೆಯ ನಡೆದ ಬೆನ್ನಲ್ಲೇ ಸೋಮವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಆಗಮಿಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ಪ್ರಕಟಿಸಬೇಕೆಂದು ಮನವಿ ಮಾಡಿದ್ದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ಸಮಯದಲ್ಲೇ ಈ ವಿಚಾರ ಪ್ರತಿಧ್ವನಿಸಿದೆ. ಫೆ.10 ರಂದು ನಡೆದ ಮೊದಲ ಹಂತದ ಸಮಯದಲ್ಲೇ ಅಲಿಗಢದಲ್ಲಿ ಚುನಾವಣೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲು!