ಬೆಂಗಳೂರು : ಈ ವರ್ಷಾಂತ್ಯದ ಒಳಗಡೆ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮೀಸಲಾತಿ ಸರಿಪಡಿಸಲು 16 ವಾರ ಬೇಕೆಂದ ಸರ್ಕಾರದ ವಿರುದ್ಧ ಗರಂ ಆದ ಕೋರ್ಟ್ ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಚಾಟಿ ಬೀಸಿದೆ.
ಬಿಬಿಎಂಪಿ ಮೀಸಲಾತಿ ವಿಚಾರವಾಗಿ ಮೀಸಲಾತಿ ಸರಿಪಡಿಸಲು 4 ತಿಂಗಳು ಕಾಲಾವಕಾಶ ಬೇಕೆಂದು ಸರ್ಕಾರ ಕೋರ್ಟ್ಗೆ ಮನವಿ ಸಲ್ಲಿಸಿತ್ತು. ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರ ಪೀಠ,
ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಅಸಮಾಧಾನ ಹೊರಹಾಕಿ ಪ್ರಮಾಣಪತ್ರಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದ್ದು, 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಎಂದು ಆದೇಶಿಸಿದೆ.