Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಕಾಲುವೆ ಒತ್ತುವರಿ ಹೈಕೋರ್ಟ್ ಗರಂ

ರಾಜಕಾಲುವೆ ಒತ್ತುವರಿ ಹೈಕೋರ್ಟ್ ಗರಂ
ಬೆಂಗಳೂರು , ಬುಧವಾರ, 28 ಸೆಪ್ಟಂಬರ್ 2022 (16:20 IST)
ಲೋಕಾಯುಕ್ತ ಮಧ್ಯಪ್ರವೇಶಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಮಹಾನಗರದಲ್ಲಿ ಕಳೆದ 15 ದಿನಗಳಿಂದ ರಾಜಕಾಲುವೆ ಮತ್ತು ಕರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಗಿದ್ದ ಕಟ್ಟಡಗಳನ್ನು ಬಿಬಿಎಂಪಿ ತೆರವು ಮಾಡುತ್ತಿದೆ. ಹಾಗೇ ಮಹಾದೇವಪುರ ನಗರದಲ್ಲಿರುವ ಬಾಗ್​ಮನೆ ಡೆವಲಪರ್​ನಿಂದ ರಾಜಕಾಲುವೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಹೈಕೋರ್ಟ್​ ಬಿಬಿಎಂಪಿಗೆ ಸೂಚನೆ ನೀಡಿತ್ತು. ಸೂಚನೆ ಮೇರೆಗೆ ಬಿಬಿಎಂಪಿ ತೆರವು ಕಾರ್ಯ ಕೈಗೊಂಡಾಗ, ಬಿಲ್ಡರ್ ಭಾನುವಾರದಂದು ಲೋಕಾಯುಕ್ತದ ಮೊರೆ ಹೋಗಿದ್ದರು.
 
ನಂತರ ಲೋಕಾಯುಕ್ತ ಭಾನುವಾರ ಒತ್ತುವರಿ ತೆರವಿಗೆ ತಡೆ ನೀಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶಿಸಿದೆ. ಈ ಮಧ್ಯೆ ಲೋಕಾಯುಕ್ತ ಕಾಯ್ದೆ ಮೀರಿ ಮಧ್ಯ ಪ್ರವೇಶಿಸಿದ್ದು ಏಕೆ ? ಲೋಕಾಯುಕ್ತ ಕಾಯ್ದೆಯಡಿ ತಡೆ ನೀಡುವ ಅಧಿಕಾರವಿದೆಯೇ? ಲೋಕಾಯುಕ್ತ ಕಚೇರಿಯೇ ಒತ್ತುವರಿ ತೆರವಿಗೆ ತಡೆ ನೀಡಬಹುದೇ? ಜನ ಕೋರ್ಟ್ ಬದಲು ಲೋಕಾಯುಕ್ತಕ್ಕೆ ಹೋಗಬಹುದಲ್ಲವೇ? ವ್ಯಾಪ್ತಿ ಮೀರಿದ ಆದೇಶ ನೀಡಲು ನಾವು ಅವಕಾಶ ನೀಡುವುದಿಲ್ಲ. ಲೋಕಾಯುಕ್ತದಿಂದ ಸಮಾನಾಂತರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
 
ಲೋಕಾಯುಕ್ತದ ಈ ನಿರ್ಧಾರವನ್ನು ಪ್ರಶ್ನಿಸಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್‌) ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ರಿಜಿಸ್ಟ್ರಾರ್‌, ಬಿಬಿಎಂಪಿ ಆಯುಕ್ತ, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
 
ಬುಧವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯಕ್ಕೆ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅರ್ಜಿದಾರರ ಪರ ವಕೀಲ ಪರ ಗೌತಮ್‌ ರಮೇಶ್‌ ಕೋರಿದರು. ನ್ಯಾಯಪೀಠವು ಸೆ.26ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಹೀಗಾಗಿ ಅರ್ಜಿ ವಿಚಾರಣೆ ಸತತ 2 ದಿನಗಳ ಕಾಲ ನಡೆದು ಇಂದು ತೀರ್ಪು ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ನಲಪಾಡ್ ಮತ್ತೆ ಮುಖಭಂಗ