Publish Date: Mon, 25 Apr 2022 (08:18 IST)
Updated Date: Mon, 25 Apr 2022 (09:56 IST)
ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ ಆಗಿರೋದು ಒಂದರ ಹಿಂದೆ ಒಂದರಂತೆ ಬಹಿರಂಗ ವಾಗುತ್ತಿದೆ.
ಪಿಎಸ್ಐ, ಕಾನ್ಸಟೇಬಲ್, ಕೆಪಿಎಸ್ಸಿ ಜೊತೆ ಲೋಕೋಪಯೋಗಿ ಇಲಾಖೆ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಆಗಿದೆ. 2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಎಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಉತ್ತರ ಬರೆಯಲಾಗಿದೆ.
ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರದ ಸಮೀಪದ ಹೊಟೇಲ್ವೊಂದರಲ್ಲಿ ಕುಳಿತು ಬ್ಲೂಟೂತ್ ಡಿವೈಸ್ ಮೂಲಕ ಸರಿ ಉತ್ತರ ಹೇಳಿಕೊಟ್ಟಿರುವ ಎಕ್ಸ್ಕ್ಲೋಸಿವ್ ವೀಡಿಯೋವನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿದೆ.
ಕಿಂಗ್ಪಿನ್ಗಳು ಹೋಟೆಲ್ನಿಂದ ಉತ್ತರಿಸಿದ್ದಕ್ಕೂ, ಪ್ರಶ್ನೆ ಪತ್ರಿಕೆಗೂ ತಾಳೆ ಆಗಿದೆ. ಅಕ್ಟೋಬರ್ನಲ್ಲಿ ಸನ್ಫ್ಲವರ್ ಆಯಿಲ್, ವಿಜಯನಗರ ಸಾಮ್ರಾಜ್ಯ, 60 ಹೀಗೆ ಒಂದೊಂದೆ ಉತ್ತರಗಳನ್ನು ಆರೋಪಿಗಳು ಅಭ್ಯರ್ಥಿಗಳಿಗೆ ಹೇಳಿಕೊಟ್ಟಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ.
Ramya kosira
Publish Date: Mon, 25 Apr 2022 (08:18 IST)
Updated Date: Mon, 25 Apr 2022 (09:56 IST)