Publish Date: Sat, 23 Apr 2022 (19:06 IST)
Updated Date: Sat, 23 Apr 2022 (19:11 IST)
545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ 545 ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ಪಿಎಸ್‌ಐ ಆಗಿ ನೇಮಕವಾಗಿರೋ ಅಭ್ಯರ್ಥಿ ಹಾಗೂ ಮತ್ತೊಬ್ಬರು ಮಾತನಾಡಿರುವ ಅಕ್ರಮಕ್ಕೆ ಸಂಬಂಧಿಸಿದಂತ ಆಡಿಯೋ ಸಂಭಾಷಣೆಯನ್ನು ರಿಲೀಸ್ ಮಾಡಿದ್ದಾರೆ. ಇಂದು ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ 545 ಪಿಎಸ್‌ಐ ನೇಮಕಾತಿ ಅಕ್ರಮ ಮಾತ್ರ ನಡೆದಿಲ್ಲ. ಮುಂದಿನ 402 ಪಿಎಸ್‌ಐ ಹುದ್ದೆಗಳಲ್ಲಿಯೂ ಅಕ್ರಮ ನಡೆದಿದೆ. ಈಗಲೇ ಆ ಹುದ್ದೆಗಳಿಗೆ ಹಣ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.