Publish Date: Sun, 12 Dec 2021 (07:25 IST)
Updated Date: Sun, 12 Dec 2021 (08:28 IST)
ಬೆಂಗಳೂರು : ಚಿನ್ನದ ದರ ಕಡಿಮೆ ಬೆಲೆ ಇರುವಾಗಲೇ ಚಿನ್ನ ಖರೀದಿಸೋಣ ಎಂದು ಕಾದು ಕುಳಿತವರೂ ಇರುತ್ತಾರೆ. ಹಾಗಾಗಿಯೇ ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?
ಇಂದು ಚಿನ್ನದ ಅಭರಣಗಳನ್ನು ಖರೀದಿಸಲು ಸೂಕ್ತವೇ? ಎಂಬೆಲ್ಲಾ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಡಿಸೆಂಬರ್ 12, ಭಾನುವಾರ) ಚಿನ್ನ, ಬೆಳ್ಳಿ ದರ ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,100 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,51,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,400 ರೂಪಾಯಿ ಏರಿಕೆ ಕಂಡು ಬಂದಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,200 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,92,000 ರೂಪಾಯಿ ನಿಗದಿಯಾಗಿದೆ.
ದೈನಂದಿನ ದರ ಬದಲಾವಣೆಯಲ್ಲಿ 1,700 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 61,200 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿ ಏರಿಕೆಯಾಗಿದೆ.
Ramya kosira
Publish Date: Sun, 12 Dec 2021 (07:25 IST)
Updated Date: Sun, 12 Dec 2021 (08:28 IST)