ನವದೆಹಲಿ : ಜಾರಿ ನಿರ್ದೇಶನಾಲಯವು ಇಂದು ದೆಹಲಿ, ಪಂಜಾಬ್ ಮತ್ತು ಹೈದರಾಬಾದ್ನ 35 ಸ್ಥಳಗಳಲ್ಲಿ ದಾಳಿ ನಡೆಸಿದೆ.
ದೆಹಲಿ ಸರ್ಕಾರ ಹಿಂಪಡೆದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದೆ.
ಈ ರಾಜ್ಯಗಳಲ್ಲಿ ಮದ್ಯದ ಕಂಪನಿಗಳು, ವಿತರಕರು ಮತ್ತು ಪೂರೈಕೆ ಜಾಲಗಳಿಗೆ ಸಂಬಂಧಿಸಿದ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರದ ದಾಳಿಯನ್ನು ಕೊಳಕು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದಾರೆ.
500 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. 3 ತಿಂಗಳಿನಿಂದ 300 ಕ್ಕೂ ಹೆಚ್ಚು ಸಿಬಿಐ, ಇಡಿ ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮನೀಶ್ ಸಿಸೋಡಿಯಾ ನಿವಾಸ, ಕಚೇರಿಗಳ ಮೇಲೂ ದಾಳಿ ನಡೆದವು.