Publish Date: Mon, 05 Jun 2023 (11:58 IST)
Updated Date: Mon, 05 Jun 2023 (11:59 IST)
ಬೆಂಗಳೂರು : ಮಹಿಳೆಯರಿಗೂ ಉಚಿತ ಸರ್ಕಾರಿ ಬಸ್ ಪ್ರಯಾಣ ಬಗ್ಗೆ ಇಂದು ಸರ್ಕಾರ ಆದೇಶ ನೀಡುವ ಸಾಧ್ಯತೆ ಇದೆ. ಗೃಹ ಲಕ್ಷ್ಮಿ ಯೋಜನೆಗೂ ಇಂದು ಸರ್ಕಾರಿ ಆದೇಶ ನೀಡಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ.
ಮಿನಿಮಮ್ ಕಂಡೀಷನ್ಸ್ ಮ್ಯಾಕ್ಸಿಮಮ್ ಬೆನಿಫಿಟ್ ಆಧಾರದಲ್ಲಿ ಆದೇಶಗಳ ಪ್ರಕಟವಾಗಲಿದ್ದು, ಆದೇಶಗಳ ಪ್ರಕಟಕ್ಕೆ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ. ಸರಾಸರಿ ವಿದ್ಯುತ್ ಬಳಕೆ ಮೇಲೆ ಉಚಿತ ಕೊಡಲು ಜನರ ವಿರೋಧವಿದ್ದು, 200 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ರಾಜ್ಯಾದ್ಯಂತ ಆಗ್ರಹಿಸಿದ್ದಾರೆ.
ಎಲ್ಲ ಗ್ಯಾರಂಟಿಗಳಲ್ಲೂ ಉಚಿತ ವಿದ್ಯುತ್ ಗ್ಯಾರಂಟಿಗೆ ವಿದ್ಯುತ್ ಬಳಕೆದಾರರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನುಡಿದಂತೆ 200 ಯುನಿಟ್ ಉಚಿತ ವಿದ್ಯುತ್ ಕೊಡುವಂತೆ ತೀವ್ರ ಒತ್ತಾಯಿಸಿದ್ದಾರೆ.