Select Your Language

Notifications

webdunia
webdunia
webdunia
webdunia

100 ಯೂನಿಟ್ ವಿದ್ಯುತ್ ಫ್ರೀ : ಅಶೋಕ್ ಗೆಹ್ಲೋಟ್ ಘೋಷಣೆ

100 ಯೂನಿಟ್ ವಿದ್ಯುತ್ ಫ್ರೀ : ಅಶೋಕ್ ಗೆಹ್ಲೋಟ್ ಘೋಷಣೆ
ಜೈಪುರ , ಗುರುವಾರ, 1 ಜೂನ್ 2023 (11:37 IST)
ಜೈಪುರ : ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ರಾಜ್ಯದ ಜನರಿಗೆ 100 ಯೂನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.
 

ತಿಂಗಳಿಗೆ 100 ಯೂನಿಟ್ವರೆಗೆ ವಿದ್ಯುತ್ ಬಳಸುವ ಜನರಿಗೆ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 

ಇದೀಗ ರಾಜಸ್ಥಾನದಲ್ಲೂ ಗೆಹ್ಲೋಟ್ ಚುನಾವಣೆ ಸಮೀಪಿಸುತ್ತಿದ್ದಂತೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿ ಮಾಡಿದ 17ರ ಹುಡುಗ ಅರೆಸ್ಟ್!