ರಾಂಪುರ ಸಮೀಪದ ನುಂಕಿಮಲೆ ಬೆಟ್ಟದ ರಸ್ತೆ ಪಕ್ಕದಲ್ಲಿರುವ ಜನಾರ್ಧನರೆಡ್ಡಿ ವಾಸ್ತವ್ಯದ ಮನೆಗೆ ಚುನಾವಣ ಆಯೋಗ ಕಣ್ಗಾವಲು ಹಾಕಿದ್ದು, ರೆಡ್ಡಿ ಬೆಂಬಲಿಗರ ಚಲನವಲನಗಳಮೇಲೆ ಹದ್ದಿನ ಕಣ್ಣು ಹಾಕಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ, ರೆಡ್ಡಿ ಮನೆ ಬಳಿ ಚೆಕ್ ಪೋಸ್ಟ್ ನಿರ್ಮಿಸಿದ ಚುನಾವಣ ಆಯೋಗ, ಎಪ್ರಿಲ್ 26 ರಿಂದಲೇ ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಜನಾರ್ಧನರೆಡ್ಡಿ ಮನೆಗೆ ಬಂದು ಹೋಗುವ ಪ್ರತಿ ವಾಹನಗಳ ತಪಾಸಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ನಡೆಯದಂತೆ ಕಡಿವಾಣ ಹಾಕಲು ಚುನಾವಣ ಆಯೋಗ ಹದ್ದಿನ ಕಣ್ಣು, ಆಪ್ತಮಿತ್ರ ಶ್ರೀರಾಮುಲು ಗೆಲುವಿಗಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿರುವ ರೆಡ್ಡಿ, ಮೊಳಕಾಲ್ಮೂರು, ಬಳ್ಳಾರಿಯ ಕ್ಷೇತ್ರಗಳಲ್ಲಿ ಆಪ್ತರನ್ನು ಗೆಲ್ಲಿಸಲು ರೆಡ್ಡಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.