ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಹೋದ ಅಭ್ಯರ್ಥಿ ಮತ್ತು ಸೂಚಕರ ಮೇಲೆ ಹಲ್ಲೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಆಯ್ಕೆ ಬಯಸಿದ್ದ ವಿರೇಶ ಸಜ್ಜನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಬೆಂಬಲಿಗರಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರವಿಂದಗೌಡ, ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷ ರತನ್ ದೇಸಾಯಿ ಅವರಿಂದ ಹಲ್ಲೆ ನಡೆದಿದೆ. ಗಾಣಿಗ ಸಮಾಜದ( ಲಿಂಗಾಯತ) ಅತಿಹೆಚ್ಚು ಮತಗಳನ್ನು ಹೊಂದಿದ್ದರಿಂದ ಗಾಣಿಗ ಸಮಾಜದ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಲು ಹೋದ ವಿರೇಶ ಸಜ್ಜನ ಮತ್ತು ಹತ್ತು ಜನ ಸೂಚಕರ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದವರ ಮೇಲೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ನಡೆದು 3 ದಿನ ಕಳೆದರು ಯಾವುದೇ ದೂರು ದಾಖಲಾಗಿಲ್ಲ.ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ಮುಖಂಡರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಗಾಣಿಗ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಾಗ ಹಲ್ಲೆ ಪ್ರಕರಣ ಬಯಲಿಗೆ ಬಂದಿದೆ.