ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರಲು ಪ್ರಧಾನ ಪಾತ್ರ ವಹಿಸಿದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಒಂದೊಮ್ಮೆ ಉಪಮುಖ್ಯಂತ್ರಿ ಸ್ಥಾನಕ್ಕೇ ಪಟ್ಟು ಹಿಡಿದಿದ್ದರು. ಆದರೆ ಇದೀಗ ಬೇಡಿದ ಖಾತೆ ಸಿಗದೇ ನಿರಾಶರಾಗಿದ್ದಾರೆಯೇ?
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯ ಬಹುತೇಕ ಅಂತಿಮಗೊಂಡಿದೆ. ಆದರೆ ಡಿಕೆ ಶಿವಕುಮಾರ ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಹಣಕಾಸು ಅಥವಾ ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದರೆ ಇವೆರಡೂ ಈಗ ಜೆಡಿಎಸ್ ಪಾಲಾಗಿವೆ.
ಹೀಗಾಗಿ ಡಿಕೆಶಿ ಅಸಮಾಧಾನಗೊಂಡಿದ್ದಾರೆಯೇ? ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಎಚ್ ಡಿ ರೇವಣ್ಣ ಜತೆಗೆ ಪೈಪೋಟಿ ಇದೆಯೇ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರದಲ್ಲಿ ಈ ಅನುಮಾನ ಎದ್ದಿದೆ. ‘ರೇವಣ್ಣ ದೊಡ್ಡ ಮನೆ ಮಕ್ಕಳು. ಅವರ ಜತೆ ನಾನು ಫೈಟ್ ಮಾಡಕ್ಕಾಗುತ್ತಾ? ನಾನು ಸಾಮಾನ್ಯ ರೈತರ ಮಗ’ ಎಂದು ಡಿಕೆಶಿ ಪರೋಕ್ಷವಾಗಿ ತಮ್ಮೊಳಗಿರುವ ಅಸಮಾಧಾನ ಹೊರ ಸೂಸಿದ್ದಾರೆ. ಖಾತೆ ಹಂಚಿಕೆ ಆದ ಮೇಲೆ ಇನ್ನೆಷ್ಟು ಮಂದಿ ನಾಯಕರ ಅಸಮಾಧಾನ ಹೊರಬರುತ್ತೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.