Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಿಕೆ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪ್ರತಿಭಟನೆ

ಡಿಕೆ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪ್ರತಿಭಟನೆ
ಬೆಂಗಳೂರು , ಶುಕ್ರವಾರ, 1 ಜೂನ್ 2018 (19:50 IST)
ಡಿಕೆ ಶಿವಕುಮಾರ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪ್ರತಿಭಟನೆ ಮುಂದುವರೆದಿವೆ. ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆದಿದೆ. 
ಉದ್ದೇಶಪೂರಕವಾಗಿ ಡಿಕೆ ಬ್ರದರ್ಸ್ ಮತ್ತು ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣ. ಡಿಕೆಶಿ ಬಲ ಕುಗ್ಗಿಸಲು  ಸಿಬಿಐ ಮತ್ತು ಐಟಿ ಸಂಸ್ಥೆಗಳನ್ನ  ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. 
 
ಐಟಿ ಮತ್ತು ಸಿಬಿಐ ಸಂಸ್ಧೆ ಗಳು ಕೇಂದ್ರ ಸರ್ಕಾರದ ಅಂಗ  ಸಂಸ್ಥೆಗಳು. ಕೇಂದ್ರಸರ್ಕಾರದ ಮಾರ್ಗದರ್ಶನದಲ್ಲಿ ಈ ಎರಡು ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಏನೇ ಆದರೂ ಡಿಕೆ ಬ್ರದರ್ಸ್ ಅನ್ನು ಏನು ಮಾಡಿಕೊಳ್ಳಲು  ಸಾಧ್ಯವಿಲ್ಲ ಎಂದು ನಗರ ಕಾಂಗ್ರೆಸ್ ಕಾರ್ಯಕರ್ತರು ವಾಗ್ದಾಳಿ ನಡೆಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ: ಪೇಜಾವರ ಶ್ರೀ