Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೈಬರ್ ವಂಚನೆ ಪ್ರಕರಣ: ಡಿಸಿಪಿ ಡಾ.ವಿಕ್ರಮ ಅಮಟೆ

ಕಳೆದ ಎರಡು ವರ್ಷದಲ್ಲಿ ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ವ್ಯಾಪ್ತಿ 47 ಕೇಸಗಳು ದಾಖಲಾಗಿವೆ.

ಸೈಬರ್ ವಂಚನೆ ಪ್ರಕರಣ: ಡಿಸಿಪಿ ಡಾ.ವಿಕ್ರಮ ಅಮಟೆ
ಬೆಳಗಾವಿ , ಭಾನುವಾರ, 4 ಜುಲೈ 2021 (20:53 IST)
ಬೆಳಗಾವಿ ; ಬೆಳಗಾವಿಯಲ್ಲಿ ಸೈಬರ್ ವಂಚನೆ ಕೇಸ್ ಹೆಚ್ಚಾಗುತ್ತಿವೆ. ಬರೀ ಎರಡು ವರ್ಷದಲ್ಲಿ 65 ಲಕ್ಷ ರುಪಾಯಿ ಹಣವನ್ನ ಜನರು ಕಳೆದುಕೊಂಡಿದ್ದಾರೆ. ಆನಲೈನ್ ವಂಚನೆ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ರು, ಜನರು ಮಾತ್ರ ವಂಚನೆಗೆ ಒಳಗಾಗುತ್ತಿದ್ದಾರೆ.




ಬೆಳಗಾವಿ ಪೊಲೀಸ್ 30 ಲಕ್ಷ ರುಪಾಯಿ ಹಣವನ್ನ ನೊಂದವ ರಿಗೆ ಮರಳಿಕೊಡಿಸಿದ್ದಾರೆ. ವಂಚನೆ ಪ್ರಕರಣ ಭೇದಿಸಲು ಸೈಬರ್ ಕ್ರೈಂ ನಲ್ಲಿ  Golden Hour  ತುಂಬಾ ಮಹತ್ವ ಎನ್ನುತ್ತಾರೆ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ವಿಕ್ರಮ ಅಮಟೆ. ಕಳೆದ ಎರಡು ವರ್ಷದಿಂದ ದೇಶದಲ್ಲಿ ಕೊರೋನಾ ಲಾಕಡೌನ್ ಇದೆ. ಇದನ್ನೇ ಸೈಬರ್ ವಂಚಕರು ದಾಳವಾಗಿಸಿ ಕೊಂಡಿದ್ದಾರೆ.
webdunia



ದಿನವೂ ಹತ್ತಾರು ಜನರು ಆನ್ಲೈನ್ ವಂಚನೆಗೆ ಒಳಗಾಗುತ್ತಾರೆ. ಇದರಲ್ಲಿ ಕೆಲವರು ಮಾತ್ರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಾರೆ. ಹಾಗೇ ನೋಡಿದ್ರೆ 2020 ಮತ್ತು 2021 ರಲ್ಲಿ, ಅಂದ್ರೆ ಕಳೆದ ಎರಡು ವರ್ಷದಲ್ಲಿ ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ವ್ಯಾಪ್ತಿ 47 ಕೇಸಗಳು ದಾಖಲಾಗಿವೆ. ಇದರಲ್ಲಿ ಜನರು 65 ಲಕ್ಷ ರುಪಾಯಿ ಹಣವನ್ನ ಕಳೆದುಕೊಂಡಿ ದ್ದಾರೆ. ಹೀಗೆ ಸೈಬರ್ ವಂಚನೆಗೆ ಒಳಗಾದ ವರಿಗೆ ಈವರೆಗೂ30 ಲಕ್ಷ ರುಪಾಯಿ ಅಷ್ಟು ಹಣವನ್ನ ಮರಳಿ ಖಾತೆ ಬಂದಿದೆ. ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಸೈಬರ್ ಠಾಣೆ ಪೊಲೀಸರು ನೊಂದವರಿಗೆ ಮರಳಿ ದೊರೆಯುವಂತೆ ಮಾಡಿದ್ದಾರೆ.
ಬಹುಪಾಲು ಜನರು ವಂಚನೆಗೆ ಒಳಗಾದ್ರು ಸೈಬರ್ ಠಾಣೆಗೆ ದೂರು ನೀಡುವುದಿಲ್ಲ. ಹೇಗೆ ಅಪಘಾತ ಪ್ರಕರಣದಲ್ಲಿ ಗೋಲ್ಡನ್ ಹವರ್ ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ರೆ ಮನುಷ್ಯನ ಪ್ರಾಣ ಉಳಿಯುತ್ತದೆ.  ಹಾಗೇಯೇ ಸೈಬರ್ ವಂಚನೆ ಅಲ್ಲೂ ಜನರು ವಂಚನೆ ಗೆ ಒಳಗಾದ ಒಂದು ಗಂಟೆಯಲ್ಲಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ರೆ ಕಳೆದುಕೊಂಡ ಹಣವನ್ನ ಮರಳಿ ಪಡೆಯಬಹು ದಾಗಿದೆ. ಸೈಬರ್ ಠಾಣೆಯಲ್ಲಿ ತಕ್ಷಣವೇ ದೂರು ನೀಡಿದ್ರೆ ವಂಚಕರ ಖಾತೆಯನ್ನು ಪೊಲೀಸರು ಪ್ರೀಜ್ ಮಾಡುತ್ತಾರೆ.
ಆದ್ರೆ ಜನರು ವಂಚನೆ ಗೆ ಒಳಗಾದ ತಕಣ ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ತಂದು ಸುಮ್ಮನಾಗುತ್ತಾರೆ. ಅದರಲ್ಲೂ ಈ ಎರಡು ವರ್ಷದಲ್ಲಿ ಓಟಿಪಿ, OLX, ಫೇಸ್ಬುಕ್, ಗಿಫ್ಟ್, ಮೆಟ್ರಿಮೊನಿಯಲ್ ಸೇರಿ 19 ಪ್ರಕಾರದಲ್ಲಿ ಮೋಸ ಮಾಡುತ್ತಿದ್ದಾರೆ. ಬೆಳಗಾವಿ ವ್ಯಕ್ತಿಯೊ ಬ್ಬನಿಗೆ ಮಹಿಳೆಯೊಬ್ಬಳು ಆನಲೈನ್ ನಲ್ಲಿ 5 ಲಕ್ಷ ರುಪಾಯಿ ವಂಚನೆ ಮಾಡಿದ್ದಳು. ತಕ್ಷಣವೇ ದೂರು ನೀಡಿದ್ದರಿಂದ ಕಳೆದುಕೊಂಡ ಹಣ ಮರಳಿ ಸಿಕ್ಕಿದೆ.
ಪೊಲೀಸ್ ಇಲಾಖೆ ಸೈಬರ್ ವಂಚಕರ ಬಗ್ಗೆ ಅನೇಕ ಜಾಗೃತಿಯನ್ನು ನಡೆಸಿದೆ. ಆದರು ಜನ ಓಟಿಪಿ ಸೇರಿ ಇತರೆ ನಿರ್ಲಕ್ಷ್ಯದಿಂದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರು ಜನ ಸಹ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆಯಿಂದ ಮನವಿಯನ್ನು ಮಾಡಿಕೊ ಳ್ಳಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕಾರ