Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡ್ರೋಣ್ ಮೂಲಕ ಲೈಟ್ ಹೌಸ್ ವಸತಿ ಯೋಜನೆ

ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಈ ವಸತಿ ಯೋಜನೆ ರೂಪಿಸಲಾಗುತ್ತಿದೆ.

ಡ್ರೋಣ್ ಮೂಲಕ ಲೈಟ್ ಹೌಸ್ ವಸತಿ ಯೋಜನೆ
ಚೆನ್ನೈ , ಶನಿವಾರ, 3 ಜುಲೈ 2021 (19:36 IST)
ಚೆನ್ನೈ : ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಇಂಡಿಯಾ ಅಡಿ ನಿರ್ಮಾಣವಾಗುತ್ತಿರುವ ಲೈಟ್ಹೌಸ್ ಯೋಜನೆಯನ್ನು ಇಂದು ಪ್ರಧಾನ ಮಂತ್ರಿ ಪರಿಶೀಲನೆ ನಡೆಸಿದರು. ವಿಶೇಷ ಎಂದರೆ ದೇಶಾದ್ಯಂತ ನಿರ್ಮಾಣವಾಗುತ್ತಿರುವ ಈ ಯೋಜನೆಯನ್ನು ಅವರು ಡ್ರೋಣ್ಗಳ ಮೂಲಕ ಪರಿಶೀಲಿಸಿದರು.























 ಜನವರಿ 1 ರಂದು ಪ್ರಧಾನಿ ಈ ಲೈಟ್ ಹೌಸ್ ಯೋಜನೆಗೆ ಚಾಲನೆ ನೀಡಿದ್ದರು. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಈ ವಸತಿ ಯೋಜನೆ ರೂಪಿಸಲಾಗುತ್ತಿದೆ. ದೇಶದ ಆರು ರಾಜ್ಯಗಳಲ್ಲಿ ಈ ಅಗ್ಗದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಕಡಿಮೆ ಅವಧಿ ಅಂದರೆ ವರ್ಷದೊಳಗೆ ಈ ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮನೆಗಳನ್ನು ಉತ್ತಮ ಗುಣಮಟ್ಟದ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಜರ್ಮನಿ, ಫ್ರಾನ್ಸ್ ಮತ್ತು ಕೆನಡಾದಲ್ಲಿ ಇಂತಹ ಆಧುನಿಕ ಪದ್ಧತಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.
ಮಧ್ಯಪ್ರದೇಶದ ಇಂದೋರ್ , ಗುಜರಾತ್ನ ರಾಜ್ಕೋಟ್, ತಮಿಳುನಾಡಿನ ಚೆನ್ನೈ, ಜಾರ್ಖಂಡ್ನ ರಾಂಚಿ , ತ್ರಿಪುರದ ಅಗರ್ತಲಾ ಮತ್ತು ಉತ್ತರ ಪ್ರದೇಶದ ಲಕ್ನೋ ನಲ್ಲಿ ಈ ಲೈಟ್ ಹೌಸ್ ಯೋಜನೆಯ ಮನೆಗಳನ್ನು ನಿರ್ಮಿಸಲಾಗುತ್ತಿದೆ.
ಇಂದೋರ್ನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಇಟ್ಟಿಗೆ ಮತ್ತು ಗಾರೆ ಗೋಡೆಗಳ ಬದಲಾಗಿ, ಫ್ಯಾಬ್ರಿಕೆಡೆಟ್ ಸ್ಯಾಂಡ್ವಿಚ್ ಪ್ಯಾನಲ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.
ರಾಜ್ಕೋಟ್ನಲ್ಲಿ ಮನೆಗಳನ್ನು ಫ್ರೆಂಚ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವುದು. ಸುರಂಗಗಳನ್ನು ಬಳಸುವ ಏಕಶಿಲೆಯ ಕಾಂಕ್ರೀಟ್ ನಿರ್ಮಾಣ ತಂತ್ರಜ್ಞಾನವನ್ನು ಬಳಸಲಾಗುತ್ತಿವೆ. ಇವು ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ
ಕೆನಡಾದ ತಂತ್ರಜ್ಞಾನವನ್ನು ಲಖನೌದಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ನಿರ್ಮಾಣಗಳಲ್ಲಿ ಪ್ಲ್ಯಾಸ್ಟರ್ ಮತ್ತು ಪೇಂಟ್ ಅಗತ್ಯವಿರುತ್ತದೆ. ಚೆನ್ನೈನಲ್ಲಿ, ಯುಎಸ್ ಮತ್ತು ಫಿನ್ಲೆಂಡ್ನ ಪ್ರಿಕಾಸ್ಟ್ ಕಾಂಕ್ರೀಟ್ ವ್ಯವಸ್ಥೆಯನ್ನು ಮನೆಗಳನ್ನು ವೇಗವಾಗಿ ಮತ್ತು ಅಗ್ಗವಾಗಿ ನಿರ್ಮಿಸಲು ಬಳಸಲಾಗುತ್ತದೆ.ರಾಂಚಿಯಲ್ಲಿ, ಜರ್ಮನ್ 3 ಡಿ ನಿರ್ಮಾಣ ವ್ಯವಸ್ಥೆಯನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಭೂಕಂಪಗಳನ್ನು ತಡೆದುಕೊಳ್ಳಬಲ್ಲ ನ್ಯೂಜಿಲೆಂಡ್ ತಂತ್ರಜ್ಞಾನವಾದ ಸ್ಟೀಲ್ ಫ್ರೇಮ್ಗಳನ್ನು ಬಳಸಿಕೊಂಡು ಅಗರ್ತಲಾದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಚಹಾ ಮಾರಿ ಕುಟುಂಬಕ್ಕೆ ಆಸರೆಯಾದ ಬಾಲಕಿ