ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರ ಉಪಚುನಾವಣೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ವಿಚಾರದಲ್ಲಿ ಪೈಪೋಟಿ ಶುರುವಾಗಿದ್ದು, ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಚೆಲುವರಾಯ ಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ, ಸಚಿವ ಸಿಎಸ್ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಕ್ಷೇತ್ರ ಟಿಕೆಟ್ ಗಾಗಿ ನಾವು ಕಾಂಗ್ರೆಸ್ ಜತೆ ಗೋಗೆರೆಯುತ್ತಿಲ್ಲ. ಮಂಡ್ಯ ಜೆಡಿಎಸ್ ನ ಭದ್ರಕೋಟೆಯಾಗಿದೆ. ಇಲ್ಲಿ ನಮಗೆ ಗೆಲ್ಲಲು ಬೇರೆಯವರ ಸಹಾಯಬೇಕಿಲ್ಲ. ಅನಿವಾರ್ಯವಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಅಷ್ಟೇ ಎಂದು ಸಚಿವ ಸಿಎಸ್ ಪುಟ್ಟರಾಜು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ಇದರ ಜತೆಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಪುಟ್ಟರಾಜು, ಚೆಲುವರಾಯ ಸ್ವಾಮಿ ಡೆಡ್ ಹಾರ್ಸ್ ಎಂದು ಲೇವಡಿ ಮಾಡಿದ್ದಾರೆ. ಡೆಡ್ ಹಾರ್ಸ್ ಗಳೆಲ್ಲಾ ಈಗ ಮಾತನಾಡುವಂತಾಗಿದೆ. ಚೆಲುವರಾಯಸ್ವಾಮಿಯನ್ನು ಚುನಾವಣೆಯಲ್ಲಿ ಜನರೇ ಸೋಲಿಸದ್ದರು. ಅಂತಹವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.