ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರ ಬರುತ್ತಿವೆ. ಏತನ್ಮಧ್ಯೆ ರಾಜ್ಯದ ಎರಡು ಎಂಎಲ್ ಎ ಸ್ಥಾನ ಹಾಗೂ ಮೂರು ಎಂಪಿ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ದೋಸ್ತಿ ಸರಕಾರಕ್ಕೆ ಬಿಜೆಪಿಯೇ ಸವಾಲಾಗಿದೆ.
ರಾಮನಗರ, ಜಮಖಂಡಿ ವಿಧಾನಸಭೆ ಹಾಗೂ ಮಂಡ್ಯ, ಬಳ್ಳಾರಿ, ಶಿವಮೊಗ್ಗ ಎಂಪಿ ಸ್ಥಾನಗಳಿಗೆ ಉಪಚುನಾವಣೆ ಅಖಾಡ ಸಿದ್ಧಗೊಂಡಿದೆ.
ಬಿಜೆಪಿ ಹಾಗೂ ದೋಸ್ತಿ ಸರಕಾರದ ಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಗಳಿಗೆ ಈ ಚುನಾವಣೆ ತುಂಬಾ ಮಹತ್ವದ್ದಾಗಿದೆ.
ಹೇಗಾದರೂ ಮಾಡಿ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಗೆದ್ದರೆ ಜನರು ಸರಕಾರದ ಪರವಾಗಿದ್ದಾರೆ ಎಂಬ ಸಂದೇಶ ಸಾರಬಹುದು ಎಂದು ಜೆಡಿಎಸ್ – ಕಾಂಗ್ರೆಸ್ ಮುಖಂಡರು ಲೆಕ್ಕಾಚಾರದಲ್ಲಿ ಇದ್ದಾರೆ.
ಇನ್ನು ಪ್ರಬಲ ವಿರೋಧಕ ಪಕ್ಷವಾಗಿರುವ ಬಿಜೆಪಿ ಕೂಡ ಉಪಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ತನ್ನ ಬಲ ತೋರಿಸಲು ಸಿದ್ಧತೆ ನಡೆಸಿದೆ.