ಮಂಡ್ಯ ಲೋಕಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ನಾನಾಗಿದ್ದೇನೆ ಎಂದು ಎಲ್.ಆರ್.ಶಿವರಾಮೇಗೌಡ ಹೇಳಿಕೆ ನೀಡಿದ್ದಾರೆ.
ನಾನು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ನಾನು ವರಿಷ್ಠರ ಜೊತೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಅಡ್ಡಿ ಇಲ್ಲ ಎಂದ ಅವರು, ನನಗೆ 20 ವರ್ಷದಿಂದ ಅಧಿಕಾರ ಇಲ್ಲ. ದೇವೇಗೌಡ, ಕುಮಾರಸ್ವಾಮಿ ಹೇಳಿದ್ರೆ ಜೆಪಿ ಭವನದಲ್ಲಿ ಕಸ ಗುಡಿಸೋಕು ಸಹ ಸಿದ್ಧ ಎಂದರು.
ನಾನು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ. ನಾನು ಕಾಂಗ್ರೆಸ್ ಬಿಡಲು ಜಿಲ್ಲಾ ಮುಖಂಡರೇ ಕಾರಣರಾಗಿದ್ದಾರೆ.
ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ನಾನು ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆಗ ನಾಗಮಂಗಲದಲ್ಲಿ ಸುರೇಶ್ ಗೌಡಗೆ ಟಿಕೆಟ್ ಕೊಟ್ಟು ಗೆಲ್ಲಿಸಲು ಬೇರೆ ಅವಕಾಶ ಕೊಡ್ತೇವೆ ಎಂದಿದ್ರು. ವಿಧಾನ ಪರಿಷತ್ ಟಿಕೆಟ್ ಕೊಟ್ಟಿದ್ರು
ಆದ್ರೆ ಪೂರ್ವ ತಯಾರಿ ಇಲ್ಲದ್ದರಿಂದ ನಿಲ್ಲಲು ಆಗಿಲ್ಲ ಎಂದರು.
ಲೋಕಸಭೆ ಉಪಚುನಾವಣೆ ಅಗತ್ಯ ಇರಲಿಲ್ಲ ಎಂದ ಅವರು ಇದರಿಂದ ರಾಜ್ಯದ ಜನರ ಮೇಲೆ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.