ಬೆಂಗಳೂರು : ಶಿಕ್ಷಣ ಇಲಾಖೆ ಮೇಲೆ ಮಹಾಮಾರಿ ಕೊರೊನಾ ಬಿಗ್ ಎಫೆಕ್ಟ್ ನೀಡಿದೆ.
ಕೊರೊನಾದಿಂದಾಗಿ ಸಾವಿರಾರು ಮಕ್ಕಳು ಶಾಲೆ ಬಿಟ್ಟಿದ್ದಾರೆ. 34,411 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದು, ಕೂಲಿ ಕೆಲಸ, ಬಾಲ್ಯ ವಿವಾಹ, ಗುಳೆ ಹೋಗಿದ್ದಾರೆ.
ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಮಕ್ಕಳು ಶಾಲೆಗೆ ಬರುತ್ತಿಲ್ಲ. ಬೆಂಗಳೂರು ವ್ಯಾಪ್ತಿಯಲ್ಲಿ 7135 ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಇದ್ದು, 6-14 ವರ್ಷದ 2,529 ವಿದ್ಯಾರ್ಥಿಗಳು ಶಾಲೆಯಿಂದ ಡ್ರಾಪ್ ಔಟ್ ಅಗಿದ್ದಾರೆ.
ಬೆಂಗಳೂರು – 7,135
ಕಲಬುರಗಿ – 2,129
ಬೀದರ್ – 2,609
ಯಾದಗಿರಿ – 1,608
ಚಿತ್ರದುರ್ಗ – 1,587
ಧಾರವಾಡ – 1,463
ರಾಯಚೂರು – 1,966
ವಿಜಯಪುರ – 1,152
ಶಿವಮೊಗ್ಗ – 1,046
ಕೊಪ್ಪಳ – 1,159
ಬಳ್ಳಾರಿ – 1,279
ಬೆಳಗಾವಿ – 1,265