ಭಾರತದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಲಸಿಕಾ ಅಭಿಯಾನ ಈಗಾಗಲೇ ಒಂದು ವರ್ಷ ಪೂರೈಸಿದ್ದು, ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವಾರದ ಹಿಂದೆ ದೇಶದಲ್ಲಿ ಕರ್ನಾಟಕ ಮಾಡಿದಂಥ ಸಾಧನೆಯನ್ನೇ ಇದೀಗ ರಾಜ್ಯದಲ್ಲಿ ಈ ಜಿಲ್ಲೆ ಮಾಡಿದೆ.
ಕರೊನಾ ಮೊದಲ ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಕಳೆದ ವಾರವೇ ದಾಖಲೆ ಬರೆದಿತ್ತು. ಅಂದರೆ ಜ.23ರ ಬೆಳಗ್ಗೆ 9.30ರ ವರೆಗಿನ ಲಸಿಕೀಕರಣ ಅಂಕಿ-ಅಂಶ ಪ್ರಕಾರ ಸರಿಯಾಗಿ 1 ವರ್ಷ 7 ದಿನಗಳಲ್ಲಿ ರಾಜ್ಯ ಫಸ್ಟ್ ಡೋಸ್ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿತ್ತು.
ಈಗ ಎರಡನೇ ಡೋಸ್ ಲಸಿಕೆ ವಿಚಾರದಲ್ಲಿ ಶೇ. 100 ಸಾಧನೆ ಮಾಡಿದ ರಾಜ್ಯದ ಪ್ರಥಮ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರ ಹೊರಹೊಮ್ಮಿದೆ. ರಾಜ್ಯದ 11 ಜಿಲ್ಲೆಗಳು ಎರಡನೇ ಡೋಸ್ನಲ್ಲಿ ಶೇ. 90 ಸಾಧನೆ ಮಾಡಿ ಮುಂಚೂಣಿಯಲ್ಲಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ. 100 ಗುರಿ ಸಾಧಿಸಿದೆ. ಇನ್ನು ಎರಡನೇ ಡೋಸ್ ಲಸಿಕೀಕರಣದಲ್ಲಿ ರಾಜ್ಯದ ಒಟ್ಟಾರೆ ಪ್ರಗತಿ ಸದ್ಯ ಶೇ. 88 ಇದೆ.