Publish Date: Tue, 21 Aug 2018 (08:55 IST)
Updated Date: Tue, 21 Aug 2018 (08:56 IST)
ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಇಷ್ಟು ದಿನ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆಯಾಗಿ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ ಇನ್ನು ಇದು ಸಾಧ್ಯವಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಹಲವು ಪ್ರಮಾದವೆಸಗಿ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದ ರಮ್ಯಾ ಅಧಿಕಾರಾವಧಿಗೆ ಹೈಕಮಾಂಡ್ ಕತ್ತರಿ ಹಾಕಿದೆ.
ರಾಹುಲ್ ಗಾಂಧಿಯ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿ ಇನ್ನು ರಮ್ಯಾಗಿರಲ್ಲ. ಇದೆಲ್ಲಾ ಜವಾಬ್ಧಾರಿ ಈಗ ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವಾ ಪುತ್ರ ನಿಖಿಲ್ ಆಳ್ವಾ ಹೆಗಲಿಗೇರಿದೆ. ರಮ್ಯಾ ಕೇವಲ ರಾಹುಲ್ ಗಾಂಧಿಯವರ ಟ್ವೀಟ್ ಗಳನ್ನು ರಿಟ್ವೀಟ್ ಮಾಡಿಕೊಂಡಿರಬೇಕಷ್ಟೇ. ಈ ಮೂಲಕ ಅವರು ನಾಮಕಾವಸ್ಥೆ ಸೋಷಿಯಲ್ ಮೀಡಿಯಾ ಅಧ್ಯಕ್ಷರಾಗಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.